ಪ್ರಜ್ವಲ್ ದೇವರಾಜ್ ಕೈತುಂಬಾ ಚಿತ್ರಗಳಿವೆ. ವೀರಂ, ಗಣ, ಮಾಫಿಯಾ, ಅಬ್ಬರ.. ಹೀಗೆ ಹಲವು ಚಿತ್ರಗಳಿವೆ. ಇದರ ನಡುವೆ ಇನ್ನೊಂದು ಚಿತ್ರಕ್ಕೆ ಪ್ರಜ್ವಲ್ ಓಕೆ ಎಂದಿದ್ದಾರೆ. ಹೊಸ ಚಿತ್ರದಲ್ಲಿ ಎನ್‍ಐಎ ಅಧಿಕಾರಿಯಾಗಿ ಪ್ರಜ್ವಲ್ ಕಾಣಿಸಿಕೊಳ್ಳಲಿದ್ದಾರೆ.
ಜೇಮ್ಸ್ ಚಿತ್ರಕ್ಕೆ ಸಹನಿರ್ದೇಶಕರಾಗಿದ್ದ ಮಹಂತೇಶ್ ಹಂದ್ರಾಳ್ ಹೊಸ ಚಿತ್ರಕ್ಕೆ ನಿರ್ದೇಶಕ. ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಇನ್ನೂ ಟೈಟಲ್ ಇಟ್ಟಿಲ್ಲ. ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರೋ ಭಾಸ್ಕರ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.