ಜಾತ್ರೆಗೆ ಹೋದಾಗ ತಪ್ಪಿಸಿಕೊಂಡ ಹುಡುಗ ಕರ್ಣ. ಅವನಿಗಾಗಿ ಕಾಯುತ್ತಿರೋ ಪರಿತಪಿಸುವ ತಾಯಿ.. ಆಕೆಗಾಗಿ ಜ್ಯೂ.ಆರ್ಟಿಸ್ಟ್ ಒಬ್ಬನಿಗೆ ಕರ್ಣನ ಅವತಾರ ಹಾಕಿಸಿ ಮನೆಗೆ ಕರೆತರುವ ನಾಯಕಿ.. ಮನೆಗೆ ಬಂದ ಕರ್ಣನಿಗೆ ಅವಳ ಮೇಲೇ ಕಣ್ಣು.. ಇದರ ನಡುವೆ ಏನಿದು ಎಂದು ಬೆರಗು ಹುಟ್ಟಿಸುವ ಅಷ್ಟದಿಗ್ಬಂಧನ ಮಂಡಲಕ..
ಸರಳವಾದ ಕಥೆಗಳನ್ನಿಟ್ಟುಕೊಂಡು ಚೆಂದವಾಗಿ ಕಥೆ ಹೇಳಿ ನಕ್ಕು ನಗಿಸಿ ಕಳಿಸುತ್ತಿದ್ದ ಸುನಿ ಈ ಬಾರಿ ನಗಿಸುತ್ತಲೇ ಒಂದು ಭಯಂಕರ ಕಥೆ ಹೇಳೋಕೆ ಬಂದಿದ್ದಾರೆ. ಕಾಮಿಡಿ ಸ್ಟಾರ್ ಶರಣ್ ತಮ್ಮ ನವರಸಗಳ ಅವತಾರವನ್ನೂ ತೋರಿಸಿದ್ದಾರೆ. ಅಶಿಕಾ ಕಿರುನಗೆಯಲ್ಲೇ ಕಚಗುಳಿ ಇಡುತ್ತಾರೆ. ಸಾಯಿಕುಮಾರ್, ಸುಧಾರಾಣಿ, ಭವ್ಯ, ಸಾಧುಕೋಕಿಲ, ಬಿ.ಸುರೇಶ.. ಎಲ್ಲರೂ ವಿಭಿನ್ನವಾಗಿಯೇ ಕಾಣಿಸುವಾಗ.. ಇವೆಲ್ಲಕ್ಕಿಂತ ಬೇರೆಯದೇ ಅವತಾರದಲ್ಲಿ ಪ್ರತ್ಯಕ್ಷವಾಗೋದು ಶ್ರೀನಗರ ಕಿಟ್ಟಿ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ ಮೇ 6ಕ್ಕೆ ರಿಲೀಸ್ ಆಗುತ್ತಿದೆ. ಸುನಿ, ಶರಣ್, ಅಶಿಕಾ ಜೋಡಿಯ ಚಿತ್ರ ಟ್ರೆಂಡ್‍ನನ್ನೇನೋ ಹುಟ್ಟು ಹಾಕಿದೆ. ಟ್ರೇಲರಿನಲ್ಲೂ ಹವಾ ತೋರಿಸುತ್ತಿದೆ.