ಒಂದು ಸಿನಿಮಾ ರಿಲೀಸ್ ಆದ ನಂತರ ಥಿಯೇಟರಿನಲ್ಲಿ ಜನ ಇರ್ತಾರೋ.. ಇಲ್ವೋ.. ಸಿನಿಮಾ ಸೂಪರ್ ಹಿಟ್.. ಸೂಪರ್.. ಎನ್ನುವವರನ್ನು ನೋಡಿರುತ್ತೀರಿ. ಆದರೆ ಶೋಕಿವಾಲಾ ಸ್ವಲ್ಪ ಡಿಫರೆಂಟ್. ಈ ವಾರವಷ್ಟೇ ರಿಲೀಸಾಗಿರೋ ಶೋಕಿವಾಲ ಚಿತ್ರದ ಬಗ್ಗೆ ಸ್ವತಃ ನಾಯಕ ನಟ ಅಜೇಯ್ ರಾವ್ ಮತ್ತು ನಾಯಕಿ ಸಂಜನಾ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಜನ ಥಿಯೇಟರಿಗೆ ಬರುತ್ತಿಲ್ಲ. ನಿರೀಕ್ಷೆಗಳು ಭಾರಿ ಇದ್ದವು. ಆದರೆ ಜನರೇ ಬರುತ್ತಿಲ್ಲ. ಆದರೆ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ ಎನ್ನುವುದು ಅಜಯ್ ರಾವ್ ಮಾತು.
ಸಂಜನಾ ಆನಂದ್, ತಬಲಾ ನಾಣಿ, ನಿರ್ದೇಶಕ ಜಾಕಿ ಕೂಡಾ ದಯವಿಟ್ಟು ಚಿತ್ರಮಂದಿರಕ್ಕೆ ಬನ್ನಿ, ಸಿನಿಮಾ ಗೆಲ್ಲಿಸಿ ಎಂದು ಕೈಮುಗಿದಿದ್ದಾರೆ. ಸಿನಿಮಾ ಚೆನ್ನಾಗಿದೆ. ಆದರೆ ಜನರಿಗೆ ಸಿನಿಮಾ ಬಗ್ಗೆ ಸರಿಯಾದ ಮಾಹಿತಿ ಹೋಗಿಲ್ಲ ಎನ್ನುತ್ತಿರುವ ಚಿತ್ರತಂಡದವರ ಮಾತು ನೋಡಿದರೆ, ಚಿತ್ರದ ಪ್ರಚಾರವೇ ಸರಿಯಾಗಿ ಆಗಿಲ್ಲವಾ ಎನ್ನಿಸೋದು ಸಹಜ. ಆದರೆ ನಿರ್ಮಾಪಕ ಚಂದ್ರಶೇಖರ್ ಸಿನಿಮಾ ಪ್ರಚಾರವನ್ನು ಚೆನ್ನಾಗಿಯೇ ಮಾಡಿದ್ದಾರೆ.