ಕೆಜಿಎಫ್ 2.. ರಿಲೀಸ್ ಆಗಿದೆ ರೆಕಾರ್ಡ್ ಮಾಡೋಕೆ.. ಅನ್ನೋ ಲೆವೆಲ್ಲಿಗೆ ಹೋಗುತ್ತಿರೋ ಸಿನಿಮಾ. ಈಗಾಗಲೇ 1000 ಕೋಟಿ ಕಲೆಕ್ಷನ್ ರೆಕಾರ್ಡ್ ಬರೆದಿರೋ ಕೆಜಿಎಫ್ ಚಾಪ್ಟರ್ ಒಂದರ ಹಿಂದೊಂದು ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಬರೆದಿದ್ದೆಲ್ಲ ಹೊಸ ಇತಿಹಾಸ.
ಕೆಜಿಎಫ್ ರಿಲೀಸ್ ಆದಾಗ ಒಂದು ದಿನ ಮುನ್ನ ತಮಿಳುನಾಡಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ರಿಲೀಸ್ ಆಗಿತ್ತು. ಫ್ಯಾನ್ಸ್ ಎಷ್ಟೇ ವಾರ್ ಸೃಷ್ಟಿಸಿದರೂ, ಯಶ್ ಅದನ್ನು ಗಾಂಭೀರ್ಯದಿಂದ ನಿಭಾಯಿಸಿದ್ದರು. ರಿಲೀಸ್ ಆದ ನಂತರ ಆಗಿದ್ದೇ ಬೇರೆ. ವಿಜಯ್ ಚಿತ್ರದ ಕಲೆಕ್ಷನ್‍ನ್ನೂ ಹಿಂದಿಕ್ಕಿ ಮುನ್ನುಗ್ಗಿತು ಕೆಜಿಎಫ್. ತಮಿಳುನಾಡಿನಲ್ಲಿ ಸಿನಿಮಾ ರಿಲೀಸ್ ಆದ ನಂತರ ಸತತ 2 ವಾರ ನೂರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರತಿದಿನ 5 ಶೋಗಳು ಪ್ರದರ್ಶನ ಕಂಡವು. ಬೀಸ್ಟ್ ಚಿತ್ರವನ್ನೇ ತೆಗೆದು ಕೆಜಿಎಫ್ ಹಾಕಲಾಯಿತು. ಇದಾಗಿ ಈಗ ಕೆಜಿಎಫ್ 2, ತಮಿಳುನಾಡಿನಲ್ಲಿಯೇ 100 ಕೋಟಿ ಕಲೆಕ್ಷನ್ ಮಾಡಿದೆ. 17 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದೆ.
ಕನ್ನಡದಲ್ಲಿ 200 ಕೋಟಿ ಹಾಗೂ ತೆಲುಗುನಲ್ಲಿ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಕೆಜಿಎಫ್ 2, ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಮಲಯಾಳಂನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ ಬಾಹುಬಲಿ, ಆರ್.ಆರ್.ಆರ್. ನಂತರ 100 ಕೋಟಿ ಬಿಸಿನೆಸ್ ಮಾಡಿದ ಸಿನಿಮಾ ತಮಿಳೇತರ ಸಿನಿಮಾ ಕೆಜಿಎಫ್ 2.
ಇದರ ಮಧ್ಯೆ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ದ.ಕೊರಿಯಾ ಕಿಮ್ ಜಾಂಗ್ ಉನ್`ನ ಕೊರಿಯಾ ಅಲ್ಲ. ಅದು ಉತ್ತರ ಕೊರಿಯಾ. ಇದು ದ.ಕೊರಿಯಾ. ಮೇ 7ರಂದು ಸಿಯೋಲ್ (ದ.ಕೊರಿಯಾ ರಾಜಧಾನಿ)ನಲ್ಲಿ ಕನ್ನಡ ಮತ್ತು ಹಿಂದಿ ವರ್ಷನ್ ರಿಲೀಸ್ ಆಗುತ್ತಿವೆ.
ಅಂದಹಾಗೆ ಕೆಜಿಎಫ್‍ನ ಒಟಿಟಿ ರೈಟ್ಸ್ ಅಮೇಜಾನ್‍ಗೆ 320 ಕೋಟಿಗೆ ಸೇಲ್ ಆಗಿದೆ ಅನ್ನೋ ಸುದ್ದಿ ಇದೆ. ಅಧಿಕೃತವಾಗಿಲ್ಲ.