ಇದೇ ಮೇ 6ರಂದು ರಿಲೀಸ್ ಆಗುತ್ತಿರೋ ಸಿನಿಮಾ ಅವತಾರ ಪುರುಷ. ಶರಣ್-ಸುನಿ-ಅಶಿಕಾ ರಂಗನಾಥ್ ಕಾಂಬಿನೇಷನ್‍ನ ಪುಷ್ಕರ್ ಬ್ಯಾನರ್ ಸಿನಿಮಾ ಇದು. 2 ಭಾಗದಲ್ಲಿ ಬರುತ್ತಿರೋ ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಸ್ಟೋರಿ ಇದೆ. ಈಗಾಗಲೇ ಬಂದಿರೋ ಹಾಡುಗಳು ಸಖತ್ ಕ್ಲಿಕ್ ಆಗಿವೆ. ಈಗ ಚಿತ್ರದ ಟ್ರೇಲರ್‍ಗೆ ಆ್ಯಕ್ಷನ್ ಪ್ರಿನ್ಸ್ ಪವರ್ ಸಿಕ್ಕಿದೆ. ಚಿತ್ರದ ಟ್ರೇಲರ್ ರಿಲೀಸ್ ಮಾಡೋದು ಅವರೇ..
ಈಗಾಗಲೇ ಚಿತ್ರದ ಲಡ್ಡು ಸಾಂಗ್ ಮತ್ತು ಹೋಂಡಾ ಸಾಂಗ್ ಹಿಟ್ ಆಗಿವೆ.. ಎಂದಿನಂತೆ. ಶರಣ್ ಕಾಮಿಡಿ, ಅಶಿಕಾ ಗ್ಲಾಮರ್ ಜೊತೆ ಶ್ರೀನಗರ ಕಿಟ್ಟಿಯ ಭಯಾನಕ ಬ್ಲಾಕ್ ಮ್ಯಾಜಿಕ್ ಇರೋ ಚಿತ್ರದಲ್ಲಿ ಸಾಯಿಕುಮಾರ್, ಸುಧಾರಾಣಿ ಕೂಡಾ ಇದ್ದಾರೆ. ಸುನಿ ಎಂದಿನಂತೆ ಕಚಗುಳಿ ಇಡೋಕೆ ವೇಯ್ಟಿಂಗ್.