ಕೆಜಿಎಫ್ ಚಾಪ್ಟರ್ 2 ಸೂಪರ್ ಡ್ಯೂಪರ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿರೋವಾಗಲೇ ಚಾಪ್ಟರ್ 3 ಬರೋದು ಪಕ್ಕಾ ಆಯ್ತಾ? ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಅಂಥಾದ್ದೊಂದು ಸುಳಿವು ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಚಾಪ್ಟರ್ 1 ಮತ್ತು ಚಾಪ್ಟರ್ 2 ಎರಡೂ ಸೂಪರ್ ಹಿಟ್ ಎನ್ನಿಸಿಕೊಂಡಿರೋದ್ರಿಂದ.. 3ನೇ ಭಾಗಕ್ಕೆ ಪ್ಲಾನ್ ಮಾಡಿದ್ದರೂ ಮಾಡಿರಬಹುದು.
ಆದರೆ.. ಈಗಾಗಲೇ ಚಿತ್ರದ ಕೆಲವೊಂದಿಷ್ಟು ಸೀನ್‍ಗಳ ಬಗ್ಗೆ ನೀಲ್ ಮತ್ತು ಯಶ್ ಮಾತನಾಡಿಕೊಂಡಿದ್ದಾರಂತೆ. ಸ್ವತಃ ಯಶ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಷ್ಟು ಬಿಟ್ಟರೆ ಮತ್ತೇನನ್ನೂ ಹೇಳಿಲ್ಲ. ಪಾರ್ಟ್ 3 ಮಾಡೋಕೆ ಸಾಕಷ್ಟು ಅವಕಾಶ ಇದೆ. ಸ್ಟೋರಿ ಡೆವಲಪ್ ಮಾಡೋಕೂ ಚಾನ್ಸ್‍ಗಳಿವೆ ಎಂದಿರೋ ಯಶ್ ಪಾರ್ಟ್ 3 ಬಂದೇ ಬರುತ್ತೆ ಅನ್ನೋದನ್ನೂ ಹೇಳಿಲ್ಲ. ಪ್ರಶಾಂತ್ ನೀಲ್ ಕೂಡಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಬಾಯಿಬಿಟ್ಟಿಲ್ಲ.
ಕೆಜಿಎಫ್ ನಂತರ ಮುಂದೇನು ಎಂಬ ಬಗ್ಗೆ ಯಶ್ ಓಪನ್ ಆಗಿ ಇದೂವರೆಗೆ ಮಾತನಾಡಿಲ್ಲ. ನರ್ತನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆಯಾದರೂ, ಅದು ಅಧಿಕೃತವಾಗಿಲ್ಲ. ಪ್ರಶಾಂತ್ ನೀಲ್ ಅವರೇನೋ ಸದ್ಯಕ್ಕೆ ಪ್ರಭಾಸ್ ಜೊತೆ ಸಲಾರ್ ಮಾಡುತ್ತಿದ್ದಾರೆ. ಅದಾದ ನಂತರ ಎನ್‍ಟಿಆರ್ ಸಿನಿಮಾ ಇದೆ. ಶ್ರೀಮುರಳಿ ಜೊತೆ ಬಘೀರ ಇದೆ. ಸಲಾರ್ ಮುಗಿದ ನಂತರ ಕೆಜಿಎಫ್ ಚಾಪ್ಟರ್ 3 ಕೈಗೆತ್ತಿಕೊಳ್ತಾರಾ..? ಈಗಲೇ ಏನೂ ಹೇಳೋಕೆ ಆಗಲ್ಲ.