ಲವ್ ಗುರು, ಜೂಮ್, ಆರೆಂಜ್.. ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಪ್ರಶಾಂತ್ ರಾಜ್ ಈಗ ತಮಿಳು ನಟ ಸಂತಾನಂ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ನಾಯಕಿಯಾಗಿರೋದು ತಾನ್ಯಾ ಹೋಪ್. ಇತ್ತೀಚೆಗೆ ಬೆಂಗಳೂರಿನ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತವನ್ನೂ ಮಾಡಿದ್ದಾರೆ ಪ್ರಶಾಂತ್.
ಚಿತ್ರಕ್ಕೆ ಪ್ರಶಾಂತ್ ಅವರ ತಮ್ಮ ನವೀನ್ ರಾಜ್ ನಿರ್ಮಾಪಕ. ತಾನ್ಯಾ ಹೋಪ್ ಜೊತೆ ರಾಗಿಣಿ ಕೂಡಾ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ.