ಪುನೀತ್ ರಾಜಕುಮಾರ್ ಅವರು ಹೀರೋ ಆಗಿ ನಟಿಸಿರೋ ಕೊನೆಯ ಚಿತ್ರ ಮಾರ್ಚ್ 18ರಂದು ರಿಲೀಸ್ ಆಗಿ ಜಯಭೇರಿ ಬಾರಿಸಿತ್ತು. ಆಗ ಇದ್ದದ್ದು ಶಿವಣ್ಣ ಧ್ವನಿ. ಈಗ ಅದೇ ಜೇಮ್ಸ್ ಸಿನಿಮಾ ಅಪ್ಪು ಧ್ವನಿಯಲ್ಲೇ ರೀ ರಿಲೀಸ್ ಆಗಿದೆ. ಸುಮಾರು 15 ಗಂಟೆಗಳ ಅಪ್ಪು ಫುಟೇಜ್‍ಗಳನ್ನೆಲ್ಲ ಜಾಲಾಡಿ ಅಪ್ಪು ಅವರ ಧ್ವನಿಯನ್ನು ಟೆಕ್ನಾಲಜಿಯಲ್ಲೇ ಮರು ಸೃಷ್ಟಿಸಲಾಗಿದೆ.
ಸುಮಾರು 65 ಥಿಯೇಟರುಗಳಲ್ಲಿ ರೀ ರಿಲೀಸ್ ಆಗಿರೋ ಚಿತ್ರ ಪುನೀತ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಇನ್ನಿಲ್ಲ ಎಂಬ ತಮ್ಮ ನಾಯಕನ ಧ್ವನಿಯನ್ನು ಮತ್ತೊಮ್ಮೆ ಕೇಳುವ ಅವಕಾಶ ಅಭಿಮಾನಿಗಳದ್ದು. ಹೀಗಾಗಿಯೇ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ದೇಶಕ ಚೇತನ್ ಕುಮಾರ್ ಹಾಗೂ ಅಪ್ಪು ಧ್ವನಿಯನ್ನು ಮರುಸೃಷ್ಟಿಸಿದ ತಂತ್ರಜ್ಞರಿಗೆ ಥ್ಯಾಂಕ್ಸ್ ಹೇಳುತ್ತಲೇ ಮತ್ತೆ ಮತ್ತೆ ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಮತ್ತೆ ಭಾವುಕರಾಗುತ್ತಿದ್ದಾರೆ.