` ಸೂರರೈಪೊಟ್ರು ನಿರ್ದೇಶಕಿ ಜೊತೆ ಹೊಂಬಾಳೆ ಸಿನಿಮಾ : ಹೀರೋ ಸೂರ್ಯನಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸೂರರೈಪೊಟ್ರು ನಿರ್ದೇಶಕಿ ಜೊತೆ ಹೊಂಬಾಳೆ ಸಿನಿಮಾ : ಹೀರೋ ಸೂರ್ಯನಾ?
Sudha Kongara, Hombale Films Image

ಹೊಂಬಾಳೆ ಸಾಲು ಸಾಲು ಸಿನಿಮಾ ಮಾಡುತ್ತಿದೆ. ಕನ್ನಡದಲ್ಲಿ.. ತೆಲುಗಿನಲ್ಲಿ.. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ.. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಯಶ್ ಮತ್ತು ಪ್ರಶಾಂತ್ ಜೊತೆಗಿದ್ದ ಪ್ರಾಜೆಕ್ಟ್ ಕೆಜಿಎಫ್ ಸದ್ಯಕ್ಕೆ ಮುಗಿದಿದೆ.

ಹೊಂಬಾಳೆಯ ಲಿಸ್ಟಿನಲ್ಲಿರೋ ಸಿನಿಮಾಗಳಲ್ಲಿ ಪ್ರಭಾಸ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಜಗ್ಗೇಶ್ ಚಿತ್ರಗಳಿವೆ. ಪ್ರಶಾಂತ್ ನೀಲ್ ಸಲಾರ್ ಮಾಡುತ್ತಿದ್ದರೆ, ರಿಷಬ್ ಕಾಂತಾರಾ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೊನಿ ಮಾಡುತ್ತಿದ್ದರೆ, ಸಂತೋಷ್ ಆನಂದರಾಮ್ ರಾಘವೇಂದ್ರ ಸ್ಟೋರ್ ರೆಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ 5ನೇ ಸಿನಿಮಾ ಘೋಷಿಸಿದೆ ಹೊಂಬಾಳೆ.

ಸತ್ಯ ಘಟನೆ ಆಧರಿಸಿದ ಚಿತ್ರಕ್ಕೆ ನಿರ್ದೇಶಕಿಯಾಗಿ ಬರುತ್ತಿರೋದು ಸುಧಾ ಕೊಂಗರಾ. ತಮಿಳಿನ ಸೂರರೈಪೊಟ್ರು ಸಿನಿಮಾ ನೋಡಿದ್ದವರಿಗೆ ಸುಧಾ ಕೊಂಗರಾ ಅವರ ಡೈರೆಕ್ಷನ್ ತಾಕತ್ತು ಗೊತ್ತಿರುತ್ತೆ. ಕನ್ನಡಿಗ ಕ್ಯಾ.ಗೋಪಿನಾಥ್ ಸ್ಟೋರಿಯನ್ನು ಚೆಂದವಾಗಿ ಹೇಳಿದ್ದರು ಸುಧಾ. ಸೂರ್ಯ ನಟಿಸಿದ್ದ ಚಿತ್ರ ಕನ್ನಡದಲ್ಲೂ ಡಬ್ ಆಗಿತ್ತು. ಈಗ ಅದೇ ಸುಧಾ ಕೊಂಗರಾ ಹೊಂಬಾಳೆಗಾಗಿ ಸಿನಿಮಾ ಮಾಡುತ್ತಿದ್ದಾರೆ. ಸತ್ಯ ಘಟನೆ ಆಧರಿಸಿದ ಚಿತ್ರವಂತೆ.

ಹೀರೋ ಆಗಿ ಸೂರ್ಯ ಅವರೇ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ. ಇದ್ದರೂ ಇರಬಹುದು. ಸದ್ಯಕ್ಕೆ ನಿರ್ದೇಶಕಿ ಬಿಟ್ಟು ಇನ್ಯಾವ ಮಾಹಿತಿಯನ್ನೂ ಹೊಂಬಾಳೆ ನೀಡಿಲ್ಲ.