ಇದು ಕೇವಲ ಡಬಲ್ ಮೀನಿಂಗ್.. ಸಿಂಗಲ್ ಮೀನಿಂಗ್ ಸ್ಟೋರಿ ಅಲ್ಲ.
ನಮ್ದು ಬೊಟ್ಟು.. ನಿಮ್ದು ತೊಟ್ಟು..
ನಲ್ಲಿ ಸಣ್ಣಕ್ಕಿದ್ರೂ ನೀರು ಫೋರ್ಸ್ ಆಗಿ ಬರುತ್ತೆ. ಕೆಲವು ನಲ್ಲಿ ಪೈಪ್ ದಪ್ಪ ಇದ್ರೂ ನೀರೇ ಬರಲ್ಲ. ನಿಮ್ ನಲ್ಲೀಲಿ ನೀರ್ ಬರಲ್ವಾ?
ಅಕ್ಕನಿಗೆ ಬಗ್ಗಿಸಿ ಹೊಡೆಯೋದು ಅಂದ್ರೆ ತುಂಬಾ ಪ್ರಾಣ..
ನಿಂಗೆ ಬದನೇಕಾಯಿ ಇಷ್ಟ ಆಗೋ ಹಾಗೆ.. ಅವರಿಗೆ ಪುಸ್ತಕ ಇಷ್ಟ..
ಇದು ಕಚಗುಳಿ ಇಡೋ ಡೈಲಾಗುಗಳಾದ್ರೆ..
ಮುಂದಿನ ಕಥೆ ಮತ್ತು ಡೈಲಾಗು.. ಮೆದುಳು ಮತ್ತು ಹೃದಯಕ್ಕೆ ಏಕಕಾಲಕ್ಕೆ ಕೈ ಹಾಕಿ ಉಪ್ಪು ಕಾರ ಹಾಕ್ತವೆ.
ದೇವರಿಂದ ತಪ್ಪಿಸ್ಕೊಂಡ್ರೂ ಕರ್ಮಗಳಿಂದ ತಪ್ಪಿಸ್ಕೊಳ್ಳೋಕಾಗಲ್ಲ.
ಜಾತಿ ಕಾಲಮ್ಮಲ್ಲಿ ಭಾರತದವನು ಅಂತಾ ಬರ್ಕೊಂಡ್ ಬಿಡಿ..
ನಾನು ಧರ್ಮ, ಜಾತಿ ದತ್ತು ತಗೊಂಡಿಲ್ಲ. ಮಗುನ ದತ್ತು ತಗೊಂಡಿದ್ದೀನಿ.
ಇಂತಹ ಹೃದಯಕ್ಕೆ ತಟ್ಟುವ ಸಂಭಾಷಣೆಗಳೂ ಇವೆ..
ಎರಡರ ಸೃಷ್ಟಿಕರ್ತ ವಿಜಯ್ ಪ್ರಸಾದ್. ರಾಯರ ಮಠದಲ್ಲಿ ಮುಸ್ಲಿಂ ಹುಡುಗಿಯ ಪ್ರಾರ್ಥನೆ, ಪೂಜೆ.. ಕ್ರೈಸ್ತ ಸನ್ಯಾಸಿನಿ.. ಅವಳ ಪ್ರೇಮ ಪ್ರಕರಣ.. ಹಿಂದೂ ಮುಸ್ಲಿಂ ಲವ್ ಸ್ಟೋರಿ.. ಹೀಗೆ ಬೇರೆಯದೇ ಕಥೆ ಹೇಳುತ್ತಿದ್ದಾರೆ ವಿಜಯ್ ಪ್ರಸಾದ್. ತಮ್ಮ ಎಂದಿನ ನಾಟಿ ಸ್ಟೈಲಿನಲ್ಲಿ.
ಕಳೆದ ಕೆಲವು ತಿಂಗಳಿಂದ ಇಡೀ ದೇಶ ಇದೇ ಹಿಂದೂ ಮುಸ್ಲಿಂ ಅಶಾಂತಿಯಿಂದ ನರಳುತ್ತಿದೆ. ನಲುಗುತ್ತಿದೆ. ಇಂತಹ ಹೊತ್ತಿನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ ತೋತಾಪುರಿ. ಅಂದಹಾಗೆ ಇದು ವಿವಾದಗಳು ಶುರುವಾದ ಮೇಲೆ ಸಿದ್ಧವಾದ ಸಿನಿಮಾ ಅಲ್ಲ ಅನ್ನೋದು ಎಲ್ಲರ ಗಮನಕ್ಕಿರಲಿ.
ಜಗ್ಗೇಶ್, ಡಾಲಿ ಧನಂಜಯ್, ಅದಿತಿ ಪ್ರಭುದೇವ, ಪವಿತ್ರಾ ಲೋಕೇಶ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮೊದಲಾದವರು ನಟಿಸಿರೋ ಚಿತ್ರವಿದು. ಕೆ.ಎ.ಸುರೇಶ್ ನಿರ್ಮಾಣದ ತೋತಾಪುರಿ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಶೀಘ್ರದಲ್ಲೇ ರಿಲೀಸ್ ಆಗಲಿದೆ.