ಡಾಲಿ ಧನಂಜಯ್ ಬಿಡುವೇ ಇಲ್ಲದಂತೆ ಬ್ಯುಸಿಯಾಗಿದ್ದಾರೆ. ಒಂದೆಡೆ ತೋತಾಪುರಿ ಟ್ರೇಲರ್ ರಿಲೀಸ್.. ಮತ್ತೊಂದೆಡೆ ಜಮಾಲಿಗುಡ್ಡ ಶೂಟಿಂಗ್.. ಮತ್ತೊಂದೆಡೆ ಅವರದ್ದೇ ನಿರ್ಮಾಣದ ಹೆಡ್ ಬುಷ್.. ಎಲ್ಲದರಲ್ಲೂ ತೊಡಗಿಸಿಕೊಂಡಿರುವ ಧನಂಜಯ್ ಹೀರೋ ಆಗಿರೋ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಶೂಟಿಂಗ್ ಮುಕ್ತಾಯವಾಗಿದೆ. ಬಾರೊಂದರಲ್ಲಿ ಫೈಟಿಂಗ್ ಸೀನ್ ಶೂಟಿಂಗ್‍ನೊಂದಿಗೆ ಚಿತ್ರೀಕರಣಕ್ಕೆ ಕುಂಭಳಕಾಯಿ ಹೊಡೆದಿದ್ದಾರೆ ನಿರ್ದೇಶಕ ಕುಶಾಲ್ ಗೌಡ. ನಿರ್ಮಾಪಕರಾಗಿರೋದು ಶ್ರೀಹರಿ.
ಡಾಲಿ ಎದುರು ನಾಯಕಿಯಾಗಿ ಆದಿತಿ ಪ್ರಭುದೇವ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನಾ ನಟಿಸಿರೋ ಚಿತ್ರಕ್ಕೆ ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ಗೋಕರ್ಣ ಮೊದಲಾದೆಡೆ ಶೂಟಿಂಗ್ ಮಾಡಲಾಗಿದ್ದು, ಬೆಂಗಳೂರಿನ ಎಚ್‍ಎಂಟಿಯಲ್ಲಿ ಹಾಕಿರೋ ಸೆಟ್ಟಿನಲ್ಲಿ ಶೂಟಿಂಗ್ ಮುಗಿದಿದೆ.