ಹೊಯ್ಸಳ. ಕರ್ನಾಟಕವನ್ನಾಳಿದ್ದ ಹೆಮ್ಮೆಯ ರಾಜ ವಂಶ. ಹೊಯ್ಸಳ ಚಕ್ರವರ್ತಿಯ ಚಕ್ರವರ್ತಿ. ಹುಲಿಯನ್ನು ಬರಿಗೈನಲ್ಲೇ ಕೊಂದ ಎನ್ನುವುದು ಹೊಯ್ಸಳನ ಬಗ್ಗೆ ಇರೋ ದಂತಕಥೆ. ಬೇಲೂರು, ಹಳೇಬೀಡು, ಸೋಮನಾಥಪುರ, ಶ್ರವಣ ಬೆಳಗೊಳ.. ಇವೆಲ್ಲ ಹೊಯ್ಸಳರ ಕಾಲದ ಕೊಡುಗೆಗಳು. ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ದೊರೆ ಬಿಟ್ಟಿದೇವ ವಿಷ್ಣುವರ್ಧನ. ಆದರೆ ಇದು ಆ ಕಥೆಯಲ್ಲ. ಹೊಯ್ಸಳ ಅನ್ನೋ ಸಿನಿಮಾ ಸೆಟ್ಟೇರಿದೆ.
ಡಾಲಿ ಧನಂಜಯ್ ಹೀರೋ ಆಗಿರೋ ಚಿತ್ರ ಹೊಯ್ಸಳಕ್ಕೆ ವಿಜಯ್ ನಿರ್ದೇಶಕ. ಗೀತಾ ಚಿತ್ರದ ನಂತರ ವಿಜಯ್ ನಿರ್ದೇಶನ ಮಾಡುತ್ತಿರೋ ಚಿತ್ರ ಹೊಯ್ಸಳ. ಡಾಲಿಗೆ 25ನೇ ಸಿನಿಮಾ. ಪೊಲೀಸ್ ಆಧಿಕಾರಿಯಾಗಿ ನಟಿಸುತ್ತಿರೋ ಡಾಲಿಯ ಪಾತ್ರಕ್ಕೆ ರಿಯಲ್ ಪೊಲೀಸ್ ಅವರ ವೃತ್ತಿ ಬದುಕೇ ಸ್ಫೂರ್ತಿಯಂತೆ.
ವಿಜಯ್ ಕಿರಗಂದೂರು ಅರ್ಪಿಸುತ್ತಿತೋ ಚಿತ್ರಕ್ಕೆ ಕೆಆರ್‍ಜಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಹೊಣೆ ಹೊತ್ತಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ನಿರ್ಮಾಣ ಮಾಡುತ್ತಿರೋ ಚಿತ್ರ ತಂಡದಲ್ಲಿ ಬಹುತೇಕ ರತ್ನನ್ ಪ್ರಪಂಚ ಟೀಂ ಇದೆ. ಬಡವ ರಾಸ್ಕಲ್ ನಂತರ ಡಾಲಿಗೆ ಹಿಟ್ ಜೋಡಿಯಾಗಿರೋ ಅಮೃತಾ ಅಯ್ಯಂಗಾರ್ ಈ ಚಿತ್ರಕ್ಕೆ ನಾಯಕಿ.