ಕೆಜಿಎಫ್ ರಿಲೀಸ್ ಆಗಿ 7ನೇ ದಿನಕ್ಕೆ 700 ಕೋಟಿ ಕ್ಲಬ್ ಸೇರಿದೆ. ಇದು ದಾಖಲೆಯೇ. ಏಕೆಂದರೆ ಈ ಹಾದಿಯಲ್ಲಿ ಪ್ರತಿದಿನವೂ ಒಂದೊಂದು.. ಎರಡೆರಡು ಚಿತ್ರಗಳ ದಾಖಲೆಯನ್ನು ಮುರಿಯುತ್ತಲೇ ಸಾಗಿದೆ. ದಾಖಲೆಗಳಿರೋದೇ ಬ್ರೇಕ್ ಮಾಡೋಕೆ ಎನ್ನುವಂತೆ ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2, ಈಗ 700 ಕೋಟಿ ಕ್ಲಬ್ ಸೇರಿದೆ. ಪ್ರತಿ ದಿನವೂ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡೋದು ಸುಲಭವಲ್ಲ.
ಈ ಹಾದಿಯಲ್ಲೀಗ ಕೆಜಿಎಫ್ ಆರ್.ಆರ್.ಆರ್. ಚಿತ್ರವನ್ನೂ ಹಿಂದಿಕ್ಕಿದೆ. ಹಿಂದಿಯಲ್ಲಿ 250 ಕೋಟಿ ಕ್ಲಬ್ ಸೇರಿದೆ. ಕನ್ನಡದಲ್ಲಿ 150 ಕೋಟಿ ಗುರಿ ಮುಟ್ಟುವ ಹಾದಿಯಲ್ಲಿದೆ. ತೆಲುಗಿನಲ್ಲೂ 100 ಕೋಟಿ ಮಾಡಿರೋ ಕೆಜಿಎಫ್, ತಮಿಳು ಮತ್ತು ಮಲಯಾಳಂನಲ್ಲೂ ಮೋಡಿ ಮಾಡುತ್ತಿದೆ. ವಿದೇಶಗಳಲ್ಲೂ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.