Print 
yash, hombale films srinidhi shetty, kgf chapter 2,

User Rating: 0 / 5

Star inactiveStar inactiveStar inactiveStar inactiveStar inactive
 
600 ಕೋಟಿ ಕ್ಲಬ್'ಗೆ ಕೆಜಿಎಫ್
KGF Chapter 2 Movie Image

ದಾಖಲೆಗಳನ್ನೆಲ್ಲ ಪುಡಿಗಟ್ಟಿ ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2 ಈಗ 600 ಕೋಟಿ ಕ್ಲಬ್ ಸೇರಿದೆ. ಈ ಲಿಸ್ಟಿಗೆ ಅತ್ಯಂತ ವೇಗವಾಗಿ ಸೇರಿದ ಸಿನಿಮಾ ಎಂಬ ದಾಖಲೆ ಈಗ ಕೆಜಿಎಫ್‍ನದ್ದು. ಆ ದಾರಿಯಲ್ಲಿ ಕೆಜಿಎಫ್, ಅಮೀರ್ ಖಾನ್‍ರ ದಂಗಲ್ ಚಿತ್ರದ ವೇಗದ ಗಳಿಕೆಯ ದಾಖಲೆಯನ್ನು ಮೀರಿಸಿದೆ. ದಂಗಲ್ ಆಗ ಒಂದು ವಾರದಲ್ಲಿ 197 ಕೋಟಿ ಕಲೆಕ್ಷನ್ ಮಾಡಿತ್ತು.

ಕನ್ನಡದಲ್ಲಿಯೇ ಬಾಕ್ಸಾಫೀಸ್ ಗಳಿಕೆ 100 ಕೋಟಿ ದಾಟಿದ್ದು, ಹಿಂದಿಯಲ್ಲಿ 200 ಕೋಟಿ ದಾಟಿದೆ. ತಮಿಳುನಾಡು ಮತ್ತು ಕೇರಳದಲ್ಲಿಯೂ ಲಾಭದಲ್ಲಿರೋ ಕೆಜಿಎಫ್ ಹೊಸ ಇತಿಹಾಸವನ್ನೇ ಬರೆಯುತ್ತಿದೆ. 600 ಕೋಟಿ ದಾಟಿರೋ ಕೆಜಿಎಫ್ ಗಳಿಕೆ 1000 ಕೋಟಿ ಮುಟ್ಟುವ ಎಲ್ಲ ಸಾಧ್ಯತೆಗಳೂ ಇವೆ.