` K.G.F. & R.R.R.  ಡಬ್ಬಾ ಎಂದ ಕಮಲ್ ಆರ್. ಖಾನ್ ಯಾರು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
K.G.F. & R.R.R.  ಡಬ್ಬಾ ಎಂದ ಕಮಲ್ ಆರ್. ಖಾನ್ ಯಾರು..?
KGF Chapter 2, Kamal R Khan Image

ಕೆಜಿಎಫ್ ಚಾಪ್ಟರ್ 2 ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕರ್ನಾಟಕದ ರಾಕಿಂಗ್ ಸ್ಟಾರ್ ಅಲ್ಲ. ಇಂಡಿಯನ್ ಸ್ಟಾರ್. ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಹೆಸರು ಈಗ ಇಂಡಿಯಾದೆಲ್ಲೆಡೆ ಚರ್ಚೆಯಾಗುತ್ತಿರೋ ಹೆಸರು. ಇದಕ್ಕೂ ಮುನ್ನ ದೇಶದೆಲ್ಲೆಡೆ ಇಂತಹುದೇ ಸಂಚಲನ ಸೃಷ್ಟಿಸಿದ್ದು ರಾಜಮೌಳಿಯ ಆರ್.ಆರ್.ಆರ್. ರಾಜಮೌಳಿಯ ಸಕ್ಸಸ್ ಹಿಸ್ಟರಿಯೂ ದೊಡ್ಡದು. ಅದಕ್ಕೂ ಮೊದಲು ಸಂಚಲನ ಸೃಷ್ಟಿಸಿದ್ದ ಸಿನಿಮಾ ಪುಷ್ಪ. ಈ ಮೂರೂ ಸಿನಿಮಾಗಳು ಬಾಲಿವುಡ್‍ನದ್ದಲ್ಲ. ಎರಡು ತೆಲುಗಿನ ಚಿತ್ರಗಳಾದರೆ, ಕೆಜಿಎಫ್ ಕನ್ನಡಿಗರದ್ದು. ಬಾಲಿವುಡ್ ಮಂದಿಯೂ ಹೊಗಳುತ್ತಿರೋ ಈ ಸಿನಿಮಾಗಳನ್ನು ಬಾಲಿವುಡ್‍ನ ಕೆಲವರು ಡಬ್ಬಾ, ಟಾರ್ಚರ್ ಎನ್ನುತ್ತಿದ್ದಾರೆ. ಆ ಲಿಸ್ಟಿನಲ್ಲಿ ಕಮಲ್ ಆರ್.ಖಾನ್ ಹೆಸರು ದೊಡ್ಡದು.

ಕೆಜಿಎಫ್, ಆರ್.ಆರ್.ಆರ್. ಚಿತ್ರಗಳು ಟಾರ್ಚರ್. ಲದ್ದಿ ಸಿನಿಮಾ. ಥೂ.. ಥೂ.. ಎಂದೆಲ್ಲ ಉಗಿದಿರೋ ಕಮಲ್ ಆರ್.ಖಾನ್ ಯಾರು?

ದೊಡ್ಡ ಹೆಸರೇನಲ್ಲ. ಮಾಡಿರೋದು ಮೂರು ಮತ್ತೊಂದು ಸಿನಿಮಾ. ಅದರಲ್ಲಿ ದೇಶದ್ರೋಹಿ ಅನ್ನೋ ಹಿಂದಿ ಸಿನಿಮಾವನ್ನು ಈಗ ಸ್ವತಃ ನಿರ್ಮಾಣ ಮಾಡಿ ನಟಿಸಿದ್ದ. ಅದು ಹೇಳಹೆಸರಿಲ್ಲದೆ ಮಕಾಡೆ ಮಲಗಿತ್ತು. ಮಿಕ್ಕಂತೆ ಆತ ಮಾಡಿರೋದು ಭೋಜ್‍ಪುರಿ ಸಿನಿಮಾವನ್ನು ಮಾತ್ರ. ಆ ಚಿತ್ರವೂ ರಿಲೀಸ್ ಆದಷ್ಟೇ ವೇಗವಾಗಿ ಓಡಿ ಹೋಗಿತ್ತು. ಇಂಡಿಯಾವನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂಬ ಆರೋಪದ ಮೇಲೆ ಆ ಚಿತ್ರವನ್ನು ಮಹಾರಾಷ್ಟ್ರ ಬ್ಯಾನ್ ಮಾಡಿತ್ತು. ಬಾಲಿವುಡ್‍ನ ದರಿದ್ರ ಚಿತ್ರಗಳಲ್ಲಿ ಈತನ ಚಿತ್ರಗಳು ಟಾಪ್ ಲಿಸ್ಟಿನಲ್ಲಿವೆ. ಸುಳ್ಳು ಸುದ್ದಿಗಳನ್ನು ಹಬ್ಬಿಸೋದ್ರಲ್ಲಿ, ಕೆಟ್ಟ ಕೆಟ್ಟ ಕಮೆಂಟ್ ಮಾಡೋದ್ರಲ್ಲಿ, ಸೆಲಬ್ರಿಟಿಗಳ ಬಗ್ಗೆ ಅಸಹ್ಯ ಸುದ್ದಿಗಳನ್ನು ಬಿತ್ತೋ ಕೇಸುಗಳಲ್ಲಿ ಈತನ ಹೆಸರು ಹಲವು ಬಾರಿ ಕೇಳಿ ಬಂದಿದೆ.

ಇವನ ವೊರಿಜಿನಲ್ ಹೆಸರು ರಷೀದ್ ಖಾನ್. ಈತನ ಕಾಟಕ್ಕೆ ಬೇಸತ್ತವರ ಲಿಸ್ಟು ದೊಡ್ಡದು. ಶಾರೂಕ್, ಸಲ್ಮಾನ್, ಆಸಿನ್, ಸಾರಾ ಖಾನ್, ಸ್ಮಿತಾ ಕಮಲ್.. ಹೀಗೆ ಹಲವರು. ಈಗ ಕೆಜಿಎಫ್ ಬಗ್ಗೆ ಟೀಕೆ ಮಾಡಿದ ಮೇಲೆ ಉಗಿಯುವವರ ಸಂಖ್ಯೆ ದೊಡ್ಡದಾಗಿದೆ. ಕೆಜಿಎಫ್ ನಾಗಾಲೋಟ ಮುಂದುವರೆಯುತ್ತಿದೆ.