ಯಶ್ ಅವರನ್ನ ಫ್ಯಾನ್ಸ್ ರಾಕಿಂಗ್ ಸ್ಟಾರ್, ರಾಜಾಹುಲಿ, ನಮ್ ಅಣ್ತಮ್ಮ, ಗಜಕೇಸರಿ, ಯಶ್ ಬಾಸ್.. ಎಂದೆಲ್ಲ ಪ್ರೀತಿಯಿಂದ ಕರೀತಾರೆ. ಆ ಬಿರುದುಗಳಿಗೀಗ ಹೊಸ ಸೇರ್ಪಡೆ. ಯಶ್ ಈಗ ಬಾಕ್ಸಾಫೀಸ್ ದೊಡ್ಡಪ್ಪ. ದೊಡ್ಡಪ್ಪ ಅಂತಾ ಯಾಕೆ ಕರೆದ್ರು ಅನ್ನೋದನ್ನ ತಿಳ್ಕೋಳ್ಳೋಕೆ ನೀವು ಕೆಜಿಎಫ್ ಚಾಪ್ಟರ್ 2 ನೋಡಬೇಕು.
ಅಂದಹಾಗೆ ಮೊದಲ ದಿನ 134 ಕೋಟಿ ಗಳಿಸಿದ್ದ ಕೆಜಿಎಫ್ ಚಾಪ್ಟರ್ 2, 2ನೇ ದಿನಕ್ಕೆ 240 ಕೋಟಿ ಬಿಸಿನೆಸ್ ದಾಟಿ ಮುನ್ನುಗ್ಗಿದೆ. 3ನೇ ದಿನದ ಗಳಿಕೆ 350 ಕೋಟಿ ದಾಟಿ ಆಗಿದೆ.
ಹಿಂದಿಯಲ್ಲಿ ಬಾಹುಬಲಿ-2, ದಂಗಲ್ ಚಿತ್ರಗಳ ರೆಕಾರ್ಡುಗಳನ್ನೆಲ್ಲ ಚಿಂದಿ ಮಾಡಿರೋ ಕೆಜಿಎಫ್, 2ನೇ ದಿನವೇ 100 ಕೋಟಿ ದಾಟಿದೆ. ಭಾನುವಾರದ ಬಿಸಿನೆಸ್ ಸೇರಿಸಿದರೆ 4 ದಿನಕ್ಕೇ 200 ಕೋಟಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ.
ತಮಿಳುನಾಡಿನಲ್ಲೇ ವಿಜಯ್ ಅವರ ಬೀಸ್ಟ್ ಚಿತ್ರವನ್ನು ಹಿಂದಿಕ್ಕಿರೋ ಸಿನಿಮಾ ಕೆಜಿಎಫ್. ಆಂಧ್ರ, ತೆಲಂಗಾಣ, ಕೇರಳ.. ಎಲ್ಲ ಕಡೆಯೂ ಬಾಕ್ಸಾಫೀಸ್‍ನಲ್ಲಿ ಈಗ ನಂ.1 ಆಗಿರೋದು ಕೆಜಿಎಫ್ ಚಾಪ್ಟರ್ 2.
ಸೂಪರ್ ಸ್ಟಾರ್ ರಜಿನಿಕಾಂತ್ ಕೂಡಾ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ದಾಖಲೆಗಳು ದಾಖಲೆಗಳಷ್ಟೇ. ಅ ಬಾಕ್ಸಾಫೀಸ್ ದಾಖಲೆಗಳ ದೊಡ್ಡಪ್ಪ ಈಗ ಯಶ್.