ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಹವಾ ಮೊದಲಿನಿಂದಲೂ ಕಡಿಮೆ. ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೆ ಉತ್ತಮ. ಅಕಸ್ಮಾತ್ ರಿಲೀಸ್ ಆದರೂ.. ತಮಿಳುನಾಡಿನ ಮೇನ್ ಥಿಯೇಟರುಗಳಂತೂ ಸಿಗುತ್ತಿರಲಿಲ್ಲ. ಸಿಕ್ಕರೂ ಫುಲ್ ಶೋಗಳಿರುತ್ತಿರಲಿಲ್ಲ. ಈಗ ಮಲ್ಟಿಪ್ಲೆಕ್ಸುಗಳಲ್ಲಿ ಕನ್ನಡ ಚಿತ್ರಗಳಿಗೆ ಸಿಗುತ್ತಿರೋ ಮರ್ಯಾದೆ ಇದೆಯಲ್ಲ.. ಅದಕ್ಕಿಂತ ಕೆಟ್ಟದಾಗಿರುತ್ತಿತ್ತು. ಶೋ ಟೈಂ ಮತ್ತು ಸ್ಥಳ ಎಲ್ಲೋ ಊರ ಹೊರಗೆ ಸಿಗುತ್ತಿದ್ದುದೇ ಹೆಚ್ಚು. ಗಡಿ ಭಾಗದಲ್ಲಿದ್ದ ಕನ್ನಡಿಗರಂತೂ ಎಷ್ಟೋ ಬಾರಿ ಗಡಿ ದಾಟಿ ಬಂದು ಕರ್ನಾಟಕದಲ್ಲಿಯೇ ಸಿನಿಮಾ ನೋಡಿ ಹೋಗುತ್ತಿದ್ದರು. ಅದೆಲ್ಲವನ್ನೂ ಬದಲಿಸಿರೋದು ಕೆಜಿಎಫ್ ಚಾಪ್ಟರ್ 2.
ಚೆನ್ನೈನ ಕೆಲವು ಥಿಯೇಟರುಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಮಿಡ್ ನೈಟ್ ಶೋಗಳು ನಡೆದಿವೆ. ಮಧ್ಯರಾತ್ರಿ 1 ಗಂಟೆ, 4 ಗಂಟೆಗೆ ಚೆನ್ನೈನಲ್ಲೇ ಕೆಜಿಎಫ್ ಚಾಪ್ಟರ್ 2 ಕನ್ನಡ ವರ್ಷನ್ ಶೋ ನಡೆದಿದೆ. ಅಫ್‍ಕೋರ್ಸ್.. ತಮಿಳು ಅವತರಣಿಕೆಯೂ ರಿಲೀಸ್ ಆಗಿದ್ದು, ತಮಿಳು ಕೆಜಿಎಫ್ ಚಾಪ್ಟರ್ 2ಗೆ, ತಮಿಳುನಾಡಿನಲ್ಲಿ ಕನ್ನಡದ ಕೆಜಿಎಫ್‍ಗಿಂತ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ. ಅದನ್ನು ಖುಷಿಯಿಂದಲೇ ವೆಲ್‍ಕಂ ಮಾಡಬೇಕು.
ಆದರೆ.. ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದು ಮಿಡ್ ನೈಟ್ ಶೋ ಕಂಡಿದ್ದು ಇತಿಹಾಸದಲ್ಲೇ ಮೊದಲು