` ಬಾಲಿವುಡ್ಡಿಗೆ ಗೂಗ್ಲಿ ಪವನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಾಲಿವುಡ್ಡಿಗೆ ಗೂಗ್ಲಿ ಪವನ್
Pavan Wadeyar

ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ನಟರಾಜ ಸರ್ವಿಸ್, ನಟಸಾರ್ವಭೌಮ ದಂತಾ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಪವನ್ ಒಡೆಯರ್ ಹಿಂದಿಗೆ ಹೊರಟು ನಿಂತಿದ್ದಾರೆ. ಬಾಲಿವುಡ್‍ನಲ್ಲಿ ನಿರ್ದೇಶಕರಾಗುತ್ತಿದ್ದು, ಪ್ರೀ ಪ್ರೊಡಕ್ಷನ್ ಕೆಲಸವೂ ಶುರುವಾಗಿದೆ.

ಪವನ್ ನಿರ್ದೇಶಿಸುತ್ತಿರೋ ಹೊಸ ಚಿತ್ರದ ಹೆಸರು ನೋಟರಿ. ಹೀರೋ ಆಗಿರೋದು ಪರಂಬ್ರತ್ ಚಟ್ಟೋಪಾದ್ಯಾಯ್. ಉರಿ, ಕಹಾನಿ, ಪರಿ, ಅರಣ್ಯಕ್ ಗಳಲ್ಲಿ ಗಮನ ಸೆಳೆದಿದ್ದ ಬೆಂಗಾಳಿ ನಟ ಪರಂಬ್ರತ್`ರನ್ನು ಹೀರೋ ಮಾಡಿಕೊಂಡಿದ್ದಾರೆ ಪವನ್. ಅಂದಹಾಗೆ ನೋಟರಿ, ಕಾಮಿಡಿ ಡ್ರಾಮಾ ಅಂತೆ.

ಕಾಮಿಡಿ, ಪವನ್‍ರ ತಾಕತ್ತೂ ಹೌದು. ನೋಟರಿ ಚಿತ್ರಕ್ಕೆ ಪವನ್ ಕೂಡಾ ನಿರ್ಮಾಪಕರಾಗಿದ್ದು, ಬಾಲಿವುಡ್‍ನ ಶಬೀರ್ ಬಾಕ್ಸ್‍ವಾಲಾ ಅವರ ಬ್ಯಾನರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಸದ್ಯಕ್ಕೆ ಪವನ್ ಒಡೆಯರ್ ಅವರ ರೆಮೋ ರಿಲೀಸ್ ಆಗಬೇಕಿದೆ. ಅದು ಸಿ.ಆರ್.ಮನೋಹರ್ ನಿರ್ಮಾಣದ ಸಿನಿಮಾ. ಮ್ಯೂಸಿಕಲ್ ಲವ್ ಸ್ಟೋರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಡೊಳ್ಳು ಚಿತ್ರವನ್ನೂ ತೆರೆಗೆ ತರಬೇಕಿದೆ.