` ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ : K ಕನ್ನಡಿಗರ G ಗೋಲ್ಡನ್ F ಫೆಸ್ಟಿವಲ್
KGF Chapter 2 Movie Image

ಡೌಟೇ ಇಲ್ಲ. ಇದು ಕನ್ನಡಿಗರ.. ಕನ್ನಡ ಸಿನಿಮಾ ಪ್ರೇಮಿಗಳ ಗೋಲ್ಡನ್ ಫೆಸ್ಟಿವಲ್. ರಿಲೀಸ್ ಆದ ಪ್ರತಿ ಚಿತ್ರಮಂದಿರದಲ್ಲೂ.. ಪ್ರತೀ ಸ್ಕ್ರೀನ್‍ನಲ್ಲೂ ಹಬ್ಬವೋ ಹಬ್ಬ. ಅದು ರಾಕಿಭಾಯ್ ಸೃಷ್ಟಿಸಿರೋ ಕ್ರೇಜ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್. ಸಂಜಯ್ ದತ್, ರವೀನಾ ಟಂಡನ್ ಬಗ್ಗೆ ಹುಟ್ಟಿದ ಕುತೂಹಲ. ಶ್ರೀನಿಧಿ ಶೆಟ್ಟಿ, ಅರ್ಚನಾ ಮೇಲೆ ಕಾಣಿಸಿದ ಪ್ರೀತಿ. ಒಂದಲ್ಲ..ಎರಡಲ್ಲ.. ಎಲ್ಲವೂ ಕೂಡಿ ಬಂದು ಸೃಷ್ಟಿಯಾದ ತೂಫಾನ್ ಇದು.

ಮೊದಲ ದಿನವೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 40 ಕೋಟಿ ದಾಟಲಿದೆ. ಎಲ್ಲ ಭಾಷೆಗಳ ಶೋಗಳದ್ದೂ ಸೇರಿಸಿ. ಇದೂ ಒಂದು ದಾಖಲೆ.

ಅಡ್ವಾನ್ಸ್ ಬುಕ್ಕಿಂಗ್‍ನಲ್ಲಿ ದೇಶದಾದ್ಯಂತ 40 ಕೋಟಿಗಿಂತ ಹೆಚ್ಚು ಬುಕ್ಕಿಂಗ್  ಆಗಿದೆ. ಇದು ಬಾಹುಬಲಿಗಿಂತಾ ಹೆಚ್ಚು.

ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ ಕೆಜಿಎಫ್ ಶೋಗಳು ಶುರುವಾದವು. ವಿದೇಶದಲ್ಲೂ ಕೆಲವೆಡೆ ಮಿಡ್ ನೈಟ್ ಶೋ ನಡೆದಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ವೆಂಕಟೇಶ್ವರ ಟಾಕೀಸ್‍ನಲ್ಲಿ ಯಶ್ ಅವರ ಮಹಿಳಾ ಅಭಿಮಾನಿಗಳಿಗಾಗಿಯೇ ವಿಶೇಷ ಶೋ ಇದೆ. ಯಶ್ ಅವರ ಮಹಿಳಾ ಫ್ಯಾನ್ಸ್ ಎಲ್ಲ ಒಟ್ಟಾಗಿ ಥಿಯೇಟರಿನ ಎಲ್ಲ ಟಿಕೆಟ್ ಖರೀದಿಸಿ ಒಟ್ಟಾಗಿ ಸಿನಿಮಾ ನೋಡುತ್ತಿದ್ದಾರೆ.

ಗುಜರಾತ್‍ನ ಸೂರತ್‍ನಲ್ಲಿ ಇದೇ ಮೊದಲ ಬಾರಿಗೆ 6 ಗಂಟೆ ಶೋ ಪ್ರದರ್ಶನವಾಗಿದೆ. ಗುಜರಾತ್ ಇತಿಹಾಸದಲ್ಲಿಯೇ 6 ಗಂಟೆಯ ಶೋಗಳು ಅದರಲ್ಲೂ ಸೂರತ್‍ನಲ್ಲಿ ನಡೆದಿರಲಿಲ್ಲ.

ರಿಲೀಸ್ ಆಗುವುದಕ್ಕೂ ಮುನ್ನ ರಿಲೀಸ್ ಆದ ರಣಧೀರ ಸುಲ್ತಾನಾ ಸಾಂಗ್ ಪ್ರೇಕ್ಷಕರಿಗೆ ಮತ್ತಷ್ಟು ಥ್ರಿಲ್ ಕೊಟ್ಟಿತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 40 ಮಿಲಿಯನ್‍ಗೂ ಹೆಚ್ಚು ವೀಕ್ಷಕರು ಹಾಡನ್ನು ನೋಡಿದರು.

ಸ್ಸೋ.. ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ..