ಕಂಬಳ. ನಮ್ಮ ಕನ್ನಡದ ಮಣ್ಣಿನ ಸಾಂಪ್ರದಾಯಿಕ ಕ್ರೀಡೆ. ನಮ್ಮ ನೆಲದ ಮಣ್ಣಿನ ಕಥೆ. ಆ ಕಥೆಯನ್ನು ಸಿನಿಮಾ ಮಾಡಿದ್ದಾರೆ ರಿಷಬ್ ಶೆಟ್ಟಿ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನತೆಯನ್ನೇ ತೋರಿಸುತ್ತಿರೋ ರಿಷಬ್ ಶೆಟ್ಟಿ, ಇಲ್ಲಿ ಕಂಬಳ.. ಕಂಬಳದ ಸ್ಪರ್ಧಿ.. ಅದನ್ನು ನಿಲ್ಲಿಸಲು ನಡೆಯೋ ತಂತ್ರ.. ಹೋರಾಟ.. ಒಂದು ಲವ್ ಸ್ಟೋರಿ.. ಎಲ್ಲವನ್ನೂ ಇಟ್ಟುಕೊಂಡು ಚೆಂದದ ಕಥೆ ಹೇಳ್ತೇನೆ.. ನೋಡೋಕೆ.. ಕೇಳೋಕೆ ಸಿದ್ಧರಾಗಿ ಎನ್ನುತ್ತಿದ್ದಾರೆ. ಟೀಸರ್ ಕೊಡುತ್ತಿರುವ ಭರವಸೆ ಇದು.
ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ ನಾಯಕಿಯಾಗಿದ್ದರೆ, ಕಿಶೋರ್, ಅಚ್ಯುತ್, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕಾಂತಾರಾ ಇದೇ ವರ್ಷದ ಕೊನೆಯಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ. ಕಾಂತಾರಾ ಮೇಕಿಂಗ್ಸ್ ವಂಡರ್‍ಫುಲ್ ಆಗಿದೆ.