ಜೇಮ್ಸ್. ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬದ ದಿನವೇ ರಿಲೀಸ್ ಆಗಿದ್ದ ಸಿನಿಮಾ. ಅಪ್ಪು ಅಗಲಿಕೆಯ ನೋವಿನಲ್ಲೇ ಬಂದ ಸಿನಿಮಾ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದುಬಿಟ್ಟಿತು. 100 ಕೋಟಿಯ ಗಳಿಕೆ ದಾಟಿ ಮುನ್ನಡದ ಜೇಮ್ಸ್ ಈಗ 25 ದಿನ ಪೂರೈಸಿದೆ.
ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ನಿರ್ದೇಶಕ ಚೇತನ್ ಹಾಗೂ ಚಿತ್ರತಂಡಕ್ಕೆ ಗಳಿಕೆಯಲ್ಲಿ ಒಳ್ಳೆಯ ಫಲಿತಾಂಶವನ್ನೇ ಕೊಟ್ಟಿದೆ. ಜೇಮ್ಸ್ ಬ್ಲಾಕ್ ಬಸ್ಟರ್ ಹಿಟ್.
ಈಗ ಥಿಯೇಟರಿನಲ್ಲಿ ಮಿಸ್ ಮಾಡಿಕೊಂಡವರಿಗೆ ಒಟಿಟಿಯಲ್ಲಿ ನೋಡುವ ಸಮಯ. ಇದೇ ಏಪ್ರಿಲ್ 14ರಿಂದ ಜೇಮ್ಸ್ ಒಟಿಟಿಯಲ್ಲಿ ಬರಲಿದೆ. ಸೋನಿ ಲೈವ್‍ನಲ್ಲಿ ನೀವಿದ್ದರೆ ಜೇಮ್ಸ್ ಚಿತ್ರವನ್ನು ಏಪ್ರಿಲ್ 14ರಿಂದ ನೋಡಬಹುದು.