ರಾಘವೇಂದ್ರ ರಾಜಕುಮಾರ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ರಾಘಣ್ಣಂಗೆ ನಾಯಕಿಯಾಗಿರೋದು ಶೃತಿ. ಶೃತಿ ನಟಿಸಿದ ಮೊದಲ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಗೆಸ್ಟ್ ರೋಲ್ನಲ್ಲಿ ನಟಿಸಿದ್ದರು. ಅದಾದ ಮೇಲೆ ಗೆಲುವಿನ ಸರದಾರ ಚಿತ್ರದಲ್ಲಿ ನಟಿಸಿದ್ದರು. ಅದಾದ ಸುಮಾರು 25 ವರ್ಷಗಳ ನಂತರ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೈಟಲ್ 13.
ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಗ್ಯಾರೇಜ್ನಲ್ಲಿ ಕೆಲಸ ಮಾಡುವ ಪಾತ್ರ ಮತ್ತು ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದರೆ, ಶೃತಿ ಅವರದ್ದು ಟೀ ಅಂಗಡಿ ನಡೆಸುವ ಮುಸ್ಲಿಂ ಮಹಿಳೆಯ ಪಾತ್ರ. ರಾಘಣ್ಣ ಮೋಹನ್ ಆಗಿ, ಶೃತಿ ಸಾಯಿರಾ ಬಾನು ಆಗಿ ನಟಿಸುತ್ತಿದ್ದಾರೆ. ನರೇಂದ್ರ ಬಾಬು ನಿರ್ದೇಶನದ ಚಿತ್ರಕ್ಕೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿದೆ.
ಇದು ಲವ್ ಸ್ಟೋರಿ ಕಥೆಯೇ ಹೊರತು ಲವ್ ಜಿಹಾದ್ ಸ್ಟೋರಿ ಅಲ್ಲ. ಸಂಬಂಧಗಳನ್ನು ಬೆಸೆಯುವ ಕಥೆ ಎಂದಿದ್ದಾರೆ ಶೃತಿ. 13 ಅನ್ನೋದು ಕೆಡುಕಿನ ಸಂಖ್ಯೆ ಎನ್ನುವ ಭಾವನೆ ಇದೆ. ಅದು ಯಾಕೆ ಅನ್ನೋದನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೇಳುತ್ತಿದ್ದಾರೆ ಎಂದು ನಿರ್ದೇಶಕರನ್ನು ಹೊಗಳಿದ್ದಾರೆ ರಾಘವೇಂದ್ರ ರಾಜಕುಮಾರ್.