` ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು
KGF Chapter 2 Movie Image

ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರೋ ಸಿನಿಮಾಗೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಬಲವೂ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಮ್ಯಾಜಿಕ್ ನೋಡೋಕೆ ಇಡೀ ಸಿನಿಮಾ ಜಗತ್ತು ಕುತೂಹಲದಿಂದ ಕಾಯುತ್ತಿರುವಾಗ.. ಇನ್ನೊಂದೆಡೆ ಸಿನಿಮಾ ಒಂದರ ಹಿಂದೊಂದು ದಾಖಲೆಗಳನ್ನು ಬರೆಯುತ್ತಾ ಹೋಗುತ್ತಿದೆ.

ಅಭಿಮಾನಿಗಳು ಸಿದ್ಧಪಡಿಸಿದ ಪೋಸ್ಟರ್‍ಗಳನ್ನು ಬಳಸಿಕೊಳ್ಳುತ್ತಿದೆ ಕೆಜಿಎಫ್ ಟೀಂ. ಇದೊಂದು ರೀತಿ ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳ ಪ್ರಚಾರ ಎನ್ನಬಹುದು.

ರಿಲೀಸ್ ಆಗುವುದಕ್ಕೂ ಮೊದಲೇ ಹಿಟ್ ಎಂದು ಸಲೀಸಾಗಿ ಘೋಷಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಚಿತ್ರ ಗ್ರೀಸ್‍ನಲ್ಲೂ ರಿಲೀಸ್ ಆಗುತ್ತಿದೆ.ಗ್ರೀಸ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಮತ್ತು ದ.ಭಾರತದ ಸಿನಿಮಾ ಕೆಜಿಎಫ್ ಚಾಪ್ಟರ್ 2.

ಏಪ್ರಿಲ್ 13ರಂದು ಅಮೆರಿಕದಲ್ಲಿ ಸಿನಿಮಾ ಪ್ರೀಮಿಯರ್ ಶೋ ಇದೆ. ಕೆಜಿಎಫ್ ಟೀಂ ಅಲ್ಲಿಯೇ ಇರಲಿದೆ. ವಿದೇಶಿ ಮಾರುಕಟ್ಟೆಯನ್ನು ಈ ರೀತಿ ಆಕ್ರಮಿಸಿಕೊಳ್ಳುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2.

ರಷ್ಯಾದಲ್ಲಿಯೂ ರಿಲೀಸ್ ಆಗುತ್ತಿರೋ ಕೆಜಿಎಫ್ ಚಾಪ್ಟರ್ 2, ಅಲ್ಲಿಯೂ ದಾಖಲೆ ಬರೆಯುತ್ತಿದೆ. ಎಲ್ಲ ಭಾಷೆಗಳ ವರ್ಷನ್ ಕೂಡಾ ಅಲ್ಲಿ ರಿಲೀಸ್ ಆಗಲಿದೆ.

ಅಮೆರಿಕ, ಬ್ರಿಟನ್, ಸೇರಿದಂತೆ ವಿದೇಶಗಳಲ್ಲಿ ಆಗಲೇ ಟಿಕೆಟ್ ಬುಕಿಂಗ್‍ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ ಕೆಜಿಎಫ್.

ರಾಕಿಂಗ್ ಫ್ಯಾನ್ಸ್ ಕ್ಲಬ್ ಕ್ರೇಜ್ ಹೇಗಿದೆಯೆಂದರೆ ಭೂಮಿಯಂದ 14 ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

ಇನ್ನು ಚಿತ್ರದ ಟ್ರೇಲರ್ 155 ಮಿಲಿಯನ್ ಕ್ರಾಸ್ ಮಾಡಿ ಮುನ್ನುಗ್ಗುತ್ತಿದ್ದರೆ, ಟೀಸರ್ ವೀಕ್ಷಣೆ 250 ಮಿಲಿಯನ್ ಕ್ರಾಸ್ ಮಾಡಿದೆ. ಎರಡೂ ದಾಖಲೆಯೇ..

ಇದರಿಂದ ಖುಷಿಯಾಗಿರೋದು ನಿರ್ಮಾಪಕ ವಿಜಯ್ ಕಿರಗಂದೂರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿರೋ ಚಿತ್ರದಲ್ಲಿ ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ, ಬಿ.ಸುರೇಶ್.. ಮೊದಲಾದವರು ಇನ್ನಷ್ಟು ಸೆನ್ಸೇಷನ್ ಸೃಷ್ಟಿಸಿದ್ದಾರೆ.