ಪ್ರೀಮಿಯರ್ ಪದ್ಮಿನಿ, ರತ್ನನ್ ಪ್ರಪಂಚ ಚಿತ್ರಗಳ ಮೂಲಕ ಬೇರೆಯದೇ ಶೈಲಿಯ ನಟನೆ, ಖಡಕ್ ಡೈಲಾಗ್‍ಗಳಿಂದ ಖ್ಯಾತರಾಗುತ್ತಿರೋ ನಟ ಪ್ರಮೋದ್. ಈಗ ಬಾಂಡ್ ರವಿ ಆಗಿದ್ದಾರೆ.
ಪ್ರಜ್ವಲ್ ಎಸ್.ಪಿ. ನಿರ್ದೇಶನದಲ್ಲಿ ಬರುತ್ತಿರೋ ಚಿತ್ರದಲ್ಲಿ ಮಾಸ್ ಕಮರ್ಷಿಯಲ್ ಕಥಾನಕವಿದೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಜೈಲಿನೊಳಗೆ ಬೇಡಿ ಹಾಕಿಕೊಂಡು ರಕ್ತ ಸುರಿಸುತ್ತಿರೋ ಪೋಸ್ಟರ್ ಹೊರಬಿದ್ದಿದೆ.
ಇದೊಂದು ಎಮೋಷನಲ್ ಥ್ರಿಲ್ಲರ್ ಮೂವಿ ಎನ್ನಲಾಗಿದ್ದು, ನರಸಿಂಹ ಮೂರ್ತಿ ಎಂಬುವವರು ಚಿತ್ರದ ನಿರ್ಮಾಪಕರು. ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ.