ಮಕ್ಕಳು ಹೇಳೋ ಕಥೆ.. ಮಕ್ಕಳು ಕಥೆಗಾಗಿ ಕಾಯುತ್ತಿರೋ ಕಥೆ.. ಆ ಮಕ್ಕಳ ಕಥೆಯಲ್ಲಿ ಬರೋ ಸಿಂಹಕ್ಕಿಂತ ಭಯಾನಕ ವ್ಯಕ್ತಿ.. ಗುಮ್ಮ.. ಆ ಗುಮ್ಮ ಬರೋದನ್ನೇ ಕಾಯ್ತಿರೋ ಮಕ್ಕಳ ಮೂಲಕವೇ ಟೀಸರ್ ಬಿಟ್ಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಕಾನ್ಸೆಪ್ಟ್ ಹೊಸದು. ಟ್ರೀಟ್‍ಮೆಂಟೂ ಹೊಸದು. ಪುಟ್ಟ ಟೀಸರಿನಲ್ಲೇ ವಿಕ್ರಾಂತ್ ರೋಣನ ದೃಶ್ಯ ವೈಭವ ಹೇಗಿರಲಿದೆ ಅನ್ನೋದರ ಸ್ಯಾಂಪಲ್ ಕೊಟ್ಟಿದ್ದಾರೆ ಅನೂಪ್ ಭಂಡಾರಿ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟೀಸರ್‍ನ್ನು ಯುಗಾದಿಯ ದಿನ 5 ಭಾಷೆಗಳಲ್ಲೂ ರಿಲೀಸ್ ಮಾಡಲಾಗಿದೆ. ಜುಲೈ 28ರ ಭೀಮನ ಅಮಾವಾಸ್ಯೆಗೆ ರಿಲೀಸ್. ಹಿಂದಿಯಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ಚಿರಂಜೀವಿ ಹಾಗೂ ತಮಿಳಿನಲ್ಲಿ ಸಿಂಬು ಟೀಸರ್ ರಿಲೀಸ್ ಮಾಡಿದ್ದಾರೆ. ನಜಾಫ್‍ಗಡ್ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಕೂಡಾ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟೀಸರ್‍ನ್ನು ರಿಲೀಸ್ ಮಾಡಿದ್ದು ವೀರೂ.
ಜಾಕ್ ಮಂಜು, ಶಾಲಿನಿ ಮಂಜುನಾಥ್ ನಿರ್ಮಾಣದ ಚಿತ್ರದಲ್ಲಿ ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರವಿದು.