ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾದ ಟೀಸರ್ ರಿಲೀಸ್ ಮಾಡೋಕೆ ಯುಗಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಜಾಕ್ ಮಂಜು. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಟೀಸರ್ ಎಲ್ಲ ಭಾಷೆಗಳಲ್ಲಿಯೂ ರಿಲೀಸ್ ಆಗುತ್ತಿದೆ. ಆಯಾ ಭಾಷೆಗೆ ಆಯಾ ಭಾಷೆಯ ಸ್ಟಾರ್ ನಟರೇ ಇರುತ್ತಾರೆ ಅನ್ನೋದು ವಿಶೇಷ.
ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 9.55ಕ್ಕೆ ಟೀಸರ್ ರಿಲೀಸ್.
ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರ ಫ್ಯಾಂಟಸಿ ಮೂವಿ. ಅನೂಪ್ ಭಂಡಾರಿ ನಿರ್ದೇಶಕ. ಜಾಕ್ ಮಂಜು, ಶಾಲಿನಿ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು