ವಿನಯ್ ರಾಜಕುಮಾರ್ ಮತ್ತು ಆದಿತಿ ಪ್ರಭುದೇವ ನಟಿಸುತ್ತಿರೋ ಹೊಸ ಸಿನಿಮಾ ಅಂದೊಂದಿತ್ತು ಕಾಲ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ರೀರೆಕಾರ್ಡಿಂಗ್ ಡಬ್ಬಿಂಗ್ ಹಂತದಲ್ಲಿದೆ. ಈ ಹಂತದಲ್ಲಿ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ರವಿಚಂದ್ರನ್ ಈ ಚಿತ್ರದಲ್ಲಿ ರವಿಚಂದ್ರನ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಅರ್ಥಾತ್ ಸಿನಿಮಾ ಹೀರೋ ಆಗಿಯೇ ಬರಲಿದ್ದಾರೆ. ಏಪ್ರಿಲ್ 5 & 6ನೇ ತಾರೀಕು ರವಿಚಂದ್ರನ್, ಅಂದೊಂದಿತ್ತು ಕಾಲ ಶೂಟಿಂಗ್‍ನಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲೇ. ರವಿಚಂದ್ರನ್ ಪಾತ್ರ ಏಕೆ ಬರುತ್ತೆ ಅನ್ನೋ ಗುಟ್ಟನ್ನು ಡೈರೆಕ್ಟರ್ ಕೀರ್ತಿ ಬಿಟ್ಟುಕೊಟ್ಟಿಲ್ಲ. ಏಕೆಂದರೆ ಅದು ಕಥೆಯಲ್ಲಿ ಬೇಕಾದ ಸಸ್ಪೆನ್ಸ್.
ರವಿಚಂದ್ರನ್ ಮತ್ತು ಡಾ.ರಾಜ್ ಕುಟುಂಬದ ಸ್ನೇಹ ಸಂಬಂಧ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ರಾಜ್ ಮನೆಯವರ ನಿರ್ಮಾಣದ ಚಿತ್ರಗಳಿಗೆ ಮೊದಲ ದೃಶ್ಯ ಕ್ಲಾಪ್ ಮಾಡೋಕೆ ರವಿಚಂದ್ರನ್ ಕಡ್ಡಾಯವಾಗಿ ಹೋಗುತ್ತಿದ್ದದ್ದೂ ಉಂಟು. ಶಿವಣ್ಣ ಜೊತೆ ಕೋದಂಡರಾಮ ಚಿತ್ರದಲ್ಲಿ ನಟಿಸಿದ್ದ ರವಿ, ಆ ಚಿತ್ರವನ್ನು ಸ್ವತಃ ಡೈರೆಕ್ಟ್ ಮಾಡಿದ್ದರು. ಈಗ ವಿನಯ್ ರಾಜಕುಮಾರ್ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.