ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರೋ ಜೇಮ್ಸ್ ಚಿತ್ರ ಏಪ್ರಿಲ್ 14ಕ್ಕೆ ಮನೆ ಮನೆಗೆ, ಮೊಬೈಲ್ಗೆ ಬರುತ್ತಿದೆ. ಏ.14ರಂದು ಜೇಮ್ಸ್ ಸೋನಿ ಲೈವ್ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಜೇಮ್ಸ್ ದಾಖಲೆಯ ಕಲೆಕ್ಷನ್ ಮಾಡಿದೆ. 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಜೇಮ್ಸ್ ಈಗಲೂ ಬಹುತೇಕ ಕಡೆ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.
ಪುನೀತ್, ಪ್ರಿಯಾ ಆನಂದ್ ಪ್ರಧಾನ ಪಾತ್ರದಲ್ಲಿರುವ ಜೇಮ್ಸ್ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶಕ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಸದ್ಯಕ್ಕೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ.