ವಿಕ್ರಾಂತ್ ರೋಣ. ಕಿಚ್ಚ ಸುದೀಪ್, ಅನೂಪ್ ಭಂಡಾರಿ ಕಾಂಬಿನೇಷನ್‍ನ ಸಿನಿಮಾ. ಕೊರೊನಾ ಅನಿಶ್ಚಿತತೆ ಕಾಡದೇ ಇದ್ದರೆ ಇಷ್ಟು ಹೊತ್ತಿಗೆ ಕನ್ನಡಿಗರ ಮನೆ ಮನೆಯನ್ನೂ ತಲುಪಬೇಕಿದ್ದ ಸಿನಿಮಾ. ಈಗ ವಿಕ್ರಾಂತ್ ರೋಣ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾನೆ. ಈ ಯುಗಾದಿಗೆ ಅವನದ್ದೇ ಹೋಳಿಗೆ ತುಪ್ಪ.
ಯುಗಾದಿಯ ದಿನ, ಏಪ್ರಿಲ್ 2ರಂದು ವಿಕ್ರಾಂತ್ ರೋಣ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಸರಿಯಾಗಿ ಟೀಸರ್ ಹೊರಬೀಳಲಿದೆ.
ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ. ಅನೂಪ್ ಅವರು ರಂಗಿತರಂಗ ನಂತರ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರೋ ಚಿತ್ರ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ ಕೂಡಾ ನಟಿಸಿರೋ ಚಿತ್ರದಲ್ಲಿ ನೀತು ಅಶೋಕ್ ನಾಯಕಿಯಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿದ್ದಾರೆ.
ಜಾಕ್ ಮಂಜು, ಶಾಲಿನಿ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.