ಪುನೀತ್ ರಾಜಕುಮಾರ್ ಅನ್ನೋದು ಕೇವಲ ಹೆಸರಲ್ಲ. ಅವರು ಕನ್ನಡಿಗರ ಉಸಿರು.. ಹೇಳಿದವರು ಸಿಎಂ ಬಸವರಾಜ ಬೊಮ್ಮಾಯಿ. ಶೀಘ್ರದಲ್ಲಿಯೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಜ್ ಕುಟುಂಬದವರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋದಾಗಿ ತಿಳಿಸಿದ್ದಾರೆ ಮುಖ್ಯಮಂತ್ರಿ. ಬೊಮ್ಮಾಯಿಯವರು ಇಷ್ಟೆಲ್ಲ ಮಾತನಾಡಿದ್ದು ಬಿಬಿಎಂಪಿ ಆವರಣದಲ್ಲಿ ನಡೆದ ಪುನೀತ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ.
ಬಿಬಿಎಂಪಿ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮವಿದು. ಇದೇ ವೇಳೆ ಆವರಣದಲ್ಲಿ ಗಂಧದ ಗುಡಿ ಉದ್ಯಾನವನ ಉದ್ಘಾಟಿಸಿದರು. ಇದೇ ವೇಳೆ 12 ಸಾಧಕರಿಗೆ ಪುನೀತ್ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಟಿ ತಾರಾ ಅನುರಾಧಾ, ನಟ ಹೊನ್ನವಳ್ಳಿ ಕೃಷ್ಣ, ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಮಾಜಿ ಮಂತ್ರಿ ಬಿ.ಟಿ.ಲಲಿತಾ ನಾಯಕ್, ಸುವರ್ಣ ನ್ಯೂಸ್‍ನ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಟಿವಿ 9ನ ರಂಗನಾಥ ಭರಾದ್ವಜ್, ಆರ್.ಪಿ.ಜಗದೀಶ್, ನೇತ್ರತಜ್ಞ ರಂಗಸ್ವಾಮಿ, ಸಿಸಿಬಿಯ ಪರಮೇಶ್ವರ್, ರಮ್ಯಾ ವಸಿಷ್ಟ ಅವರು ಪ್ರಶಸ್ತಿ ಸ್ವೀಕರಿಸಿದರು.