ನಟ ಭಯಂಕರ. ಹಾಗೆಂದರೆ ಕನ್ನಡಿಗರಿಗೆ ನೆನಪಾಗೋದು ವಜ್ರಮುನಿ. ಆದರೆ ಆ ಹೆಸರನ್ನ ತಮ್ಮ ಚಿತ್ರಕ್ಕೆ ಟೈಟಲ್ ಆಗಿ ಇಟ್ಟುಕೊಂಡು ಬರುತ್ತಿದ್ದಾರೆ ಒಳ್ಳೆ ಹುಡ್ಗ ಪ್ರಥಮ್. ನಟ ಭಯಂಕರ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ.
ಇವನ್ಯಾರಪ್ಪ ಇಷ್ಟೊಂದು ಮಾತಾಡ್ತಾನೆ ಎಂದುಕೊಂಡು ನೋಡ ನೋಡುತ್ತಲೇ ಪ್ರಥಮ್ ಅಭಿಮಾನಿಯಾಗಿಬಿಟ್ಟೆ. ಪ್ರಥಮ್ ಅವರ ಕಾನ್ಫಿಡೆನ್ಸ್ ನನಗೆ ತುಂಬಾನೇ ಇಷ್ಟ. ಒಂದು ಹಾಡನ್ನು ಉಪೇಂದ್ರ ಹಾಡಿದ್ದಾರೆ. ಎಲ್ಲ ಹಾಡುಗಳೂ ಚೆನ್ನಾಗಿವೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು ಶ್ರೀಮುರಳಿ.
ಅಹಂಕಾರ ಇರೋ ವ್ಯಕ್ತಿ ಒಬ್ಬರಿಗೆ ಒಂದು ಮಾತು ಕೊಡ್ತಾನೆ. ಆಮೇಲೆ ಬದಲಾಗ್ತಾನೆ. ಅದು ಒಂದು ಕಥೆ. ಇನ್ನೊಂದು ಕಥೆಯಲ್ಲಿ ಒಬ್ಬ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ಲವ್ ಸ್ಟೋರಿ. ಇವೆರಡನ್ನೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ ಪ್ರಥಮ್. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರೂ ಅವರೇ. ಪ್ರಥಮ್ ಡೈರೆಕ್ಷನ್‍ನ ಮೊದಲ ಸಿನಿಮಾ ನಟ ಭಯಂಕರ.