ಶಾನ್ವಿ ಶ್ರೀವಾತ್ಸವ್. ನೋಡೋಕೆ ಅದೆಷ್ಟೇ ಮುದ್ದು ಮುದ್ದಾಗಿದ್ದರೂ.. ದೆವ್ವಕ್ಕೂ ಅವರಿಗೂ ವಿಚಿತ್ರ ನಂಟು. ಮೊದಲು ನಟಿಸಿದ ಚಂದ್ರಲೇಖ ಚಿತ್ರದಿಂದ ಹಿಡಿದು ಶಾನ್ವಿ ನಟಿಸಿದ ಬಹುತೇಕ ಚಿತ್ರಗಳಲ್ಲಿ ಅವರಿಗೆ ದೆವ್ವದ ವೇಷ ಹಾಕಿಸಲಾಗಿದೆ. ಈಗ ಬರುತ್ತಿರೋ ಚಿತ್ರದಲ್ಲೂ ಇರೋದು ದೆವ್ವದ ಕಥೆಯೇ. ಚಿತ್ರದ ಹೆಸರು ಕಸ್ತೂರಿ ಮಹಲ್.
ಹಾರರ್ ಕಥೆಯನ್ನೂ ಹೀಗೂ ಮಾಡಬಹುದು ಎಂದು ಪ್ರೇಕ್ಷಕ ಥ್ರಿಲ್ಲಾಗುತ್ತಾನೆ. ಚಿತ್ರದಲ್ಲಿ ಬುದ್ದಿವಂತ ದೆವ್ವ ಏನೇನೆಲ್ಲ ಆಟವಾಡುತ್ತೆ ಅನ್ನೋ ಕಥೆ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ.
ಅಂದಹಾಗೆ ಈ ಚಿತ್ರಕ್ಕೆ ದಿನೇಶ್ ಬಾಬು ನಿರ್ದೇಶಕರು. ಅವರಿಗೆ ಇದು 50ನೇ ಸಿನಿಮಾ. ರವೀಶ್ ಆರ್.ಸಿ. ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಜೊತೆ ರಂಗಾಯಣ ರಘು, ಸ್ಕಂದ ಅಶೋಕ್, ವತ್ಸಲಾ ಮೋಹನ್, ಶ್ರುತಿ ಪ್ರಕಾಶ್, ನೀನಾಸಂ ಅಶ್ವತ್ಥ್, ಕಾಶಿಮಾ ಮೊದಲಾದವರು ನಟಿಸಿದ್ದಾರೆ.