ಗೋಲ್ಡನ್ ಸ್ಟಾರ್ ಗಣೇಶ್ ಸದ್ಯಕ್ಕೆ ಗಾಳಿಪಟ 2ನಲ್ಲಿ ಕಂಪ್ಲೀಟ್ ಬ್ಯುಸಿ. ಮತ್ತೊಂದೆಡೆ ತ್ರಿಬಲ್ ರೈಡಿಂಗ್. ಇನ್ನೊಂದು ದಿಕ್ಕಿನಲ್ಲಿ ಗೋಲ್ಡನ್ ಗ್ಯಾಂಗ್. ಇದೆಲ್ಲದರ ಜೊತೆಗೆ ಇನ್ನೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ ಗಣೇಶ್.
ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಗಣೇಶ್. ಪ್ರೀತಂ ಗುಬ್ಬಿ ಮತ್ತು ಗಣೇಶ್ ಅವರ ಸ್ನೇಹ ಮುಂಗಾರು ಮಳೆಯ ಮುಂಚಿನಿಂದಲೂ ಇದೆ. ಮುಂಗಾರು ಮಳೆಗೆ ಭಟ್ಟರ ಜೊತೆ ಕಥೆಗಾರರೂ ಹೌದು. ಮುಂಗಾರು ಮಳೆ ಹೀರೋ ಹೆಸರೂ ಕೂಡಾ ಪ್ರೀತಂ. ಅದಾದ ನಂತರ ಡೈರೆಕ್ಟರ್ ಆದ ಪ್ರೀತಂ ಗುಬ್ಬಿ ಗಣೇಶ್ ಅವರ ಜೊತೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ಮಾಡಿದ್ದಾರೆ. ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.