ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಿದೆ. ಲಿರಿಕಲ್ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಅತೀ ಹೆಚ್ಚು ವೀಕ್ಷಣೆ ಪಡೆದಿದೆ ತೂಫಾನ್ ಸಾಂಗ್.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಏಪ್ರಿಲ್ 14ಕ್ಕೆ. ಆ ಸಮಯಕ್ಕೆ ದೊಡ್ಡ ದೊಡ್ಡ ಚಿತ್ರಗಳ ಪೀಕ್ ಟೈಂ ಡೌನ್ ಆಗಿರುತ್ತೆ. ಹೀಗಾಗಿಯೇ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ. ಇದೆಲ್ಲವೂ ನಿರೀಕ್ಷಿತವೇ ಆಗಿದ್ದರೂ ಚಿತ್ರತಂಡ ಪ್ರಚಾರವನ್ನು ವಿಭಿನ್ನವಾಗಿಯೇ ಮಾಡುತ್ತಿದೆ.
ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕಳಿಸಬೇಕು. ಅದೇನ್ ಮಹಾ ಎಂದುಕೊಳ್ಳಬೇಡಿ. ಅದನ್ನು ಬರೆದು ಕಳಿಸಬೇಕು. ಆ ಪೋಸ್ಟರ್‍ನ್ನು ಚಿತ್ರದ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಬಳಸಿಕೊಳ್ಳುತ್ತೆ ಕೆಜಿಎಫ್ ಟೀಂ. ಗೆಟ್ ರೆಡಿ..