ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿರೋದು ಏಪ್ರಿಲ್ 14ಕ್ಕೆ. ಚಿತ್ರದ ಪ್ರಮೋಷನ್ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ಕಲಾವಿದರ ತಂಡವಿರೋ ಚಿತ್ರಕ್ಕೆ ಕ್ಯಾಪ್ಟನ್ ಪ್ರಶಾಂತ್ ನೀಲ್. ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2 ಇದುವರೆಗೆ ಪೋಸ್ಟರ್ ಮತ್ತು ಟೀಸರ್ ಬಿಟ್ಟಿರೋದ್ರ ಹೊರತಾಗಿ ಬೇರೇನನ್ನೂ ಪ್ರೇಕ್ಷಕರಿಗೆ ತೋರಿಸಿಲ್ಲ. ಅವೆಲ್ಲದಕ್ಕೂ ಈಗ ಮುಹೂರ್ತ ಕೂಡಿ ಬಂದಿದೆ.
ಮಾರ್ಚ್ 21. ಆ ದಿನ ಬೆಳಗ್ಗೆ 11.07ರ ಶುಭ ಮುಹೂರ್ತದಲ್ಲಿ ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಲಿದೆ.
ಏಪ್ರಿಲ್ 13ರಂದು ಉತ್ತರ ಅಮೆರಿಕದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.