ಜೇಮ್ಸ್ ಭರ್ಜರಿ ದಾಖಲೆ ಬರೆಯುತ್ತಿದೆ. ಪುನೀತ್ ಅವರು ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಆಗಿರುವ ಕಾರಣಕ್ಕೆ ಅಭಿಮಾನಿಗಳ ಕಾತುರವೂ ಹೆಚ್ಚು. ಹೀಗಾಗಿ ರಾಜ್ಯದ ಎಲ್ಲ ಥಿಯೇಟರುಗಳ ಎಲ್ಲ ಶೋಗಳೂ ಹೌಸ್ಫುಲ್ ಆಗಿವೆ. ಸಿನಿಮಾ ಸೂಪರ್ ಸಕ್ಸಸ್. ಹೀಗಾಗಿಯೇ ಜೇಮ್ಸ್ ನಿರ್ಮಾಪಕರ ಕಿಶೋರ್ ಪತ್ತಿಕೊಂಡ ಚಿತ್ರದ ಸಕ್ಸಸ್ ಮೀಟ್ ಆಯೋಜಿಸಲು ನಿರ್ಧರಿಸಿದ್ದಾರೆ.
ಚಿತ್ರದ 25ನೇ ದಿನ ಸಕ್ಸಸ್ ಮೀಟ್ ಮಾಡುವ ಯೋಜನೆ ಇದೆ. ಹೊಸಪೇಟೆಯಲ್ಲಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಶಿವಣ್ಣ ಶೂಟಿಂಗ್ನಲ್ಲಿದ್ದಾರೆ. ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ ಕಿಶೋರ್ ಪತ್ತಿಕೊಂಡ.
ಚಿತ್ರ ಮೊದಲ ದಿನವೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, 2ನೇ ದಿನದ ಕಲೆಕ್ಷನ್ ಡೀಟೈಲ್ಸ್ ಸಿಕ್ಕಿಲ್ಲ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಸ್ಯಾಟಲೈಟ್, ಒಟಿಟಿ, ಡಬ್ಬಿಂಗ್ ರೈಟ್ಸ್ಗಳಿಂದಲೇ 40 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಸುದ್ದಿ ಇದೆ.