ರಾಜಕುಮಾರ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ಆನಂದ್ ನಟಿಸಿದ್ದು ಕೆಲವೇ ಸಿನಿಮಾ. ಗಣೇಶ್ ಜೊತೆ ನಟಿಸಿದ್ದ ಆರೆಂಜ್ ಬಿಟ್ಟರೆ ರಾಜಕುಮಾರ ಮತ್ತು ಜೇಮ್ಸ್. ಎರಡೂ ಅಪ್ಪು ಜೊತೆಯಲ್ಲೇ.
ಒಂದು ರೀತಿಯಲ್ಲಿ ನಾನು ಲಕ್ಕಿ. ಅಪ್ಪು ಜೊತೆ ಯಾರೇ ಹತ್ತಿರ ಹೋದರೂ, ಕೆಲವೇ ನಿಮಿಷ ಅವರ ಜೊತೆ ಇದ್ದರೂ.. ಅವರಿಗೆ ಅಪ್ಪು ಇಷ್ಟವಾಗಿ ಬಿಡ್ತಾರೆ. ಅವರ ನಗು, ವ್ಯಕ್ತಿತ್ವವೇ ಅಂತದ್ದು. ಅವರ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ ಅದೃಷ್ಟ ನನ್ನದು. ರಾಜಕುಮಾರ ಚಿತ್ರದಲ್ಲಿ ಹೇಗಿತ್ತೋ.. ಜೇಮ್ಸ್‍ನಲ್ಲೂ ಅಂತಹುದೇ ವಾತಾವರಣವಿತ್ತು. ನನ್ನ ಪಾತ್ರವೂ ವಿಭಿನ್ನವಾಗಿದೆ. ತೆರೆಯ ಮೇಲೆ ಎಷ್ಟು ಹೊತ್ತು ಅನ್ನೋದಕ್ಕಿಂತ, ಆ ಪಾತ್ರಕ್ಕೆ ಸಿಕ್ಕಿರೋ ಮಹತ್ವ ಏನು ಅನ್ನೋದು ಮುಖ್ಯ ಎನ್ನುತ್ತಾರೆ ಪ್ರಿಯಾ ಆನಂದ್.
ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್‍ನಲ್ಲಿ ಪ್ರಿಯಾ ಆನಂದ್ ನಾಯಕಿ. ಬೃಹತ್ ತಾರಾಗಣವೇ ಚಿತ್ರದಲ್ಲಿದ್ದು, ಮಾಚ್ 17ರಂದು 5 ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.