ಮೊಗ್ಗಿನ ಮನಸು, ಸಿಕ್ಸರ್, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣ ಲೀಲಾ.. ಹೀಗೆ ವೆರೈಟಿ ವೆರೈಟಿ ಲವ್ ಸ್ಟೋರಿಗಳನ್ನು ಕನ್ನಡ ಪ್ರೇಕ್ಷಕರ ಮುಂದಿಟ್ಟಿದ್ದ ನಿರ್ದೇಶಕ ಶಶಾಂಕ್ ಈಗ ಪ್ರೇಕ್ಷಕರ ಲವ್ ಸ್ಟೋರಿ ಕೇಳೋಕೆ ಹೊರಟಿದ್ದಾರೆ. ಶಶಾಂಕ್ ಈಗ ಲವ್ 360 ಅನ್ನೋ ಸಿನಿಮಾವನ್ನು ಬಹುತೇಕ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ.
ಪ್ರವೀಣ್ ಅನ್ನೋ ಹೊಸ ಹುಡುಗ ಮತ್ತು ರಚನಾ ಇಂದರ್, ಕಾವ್ಯ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಆ ಚಿತ್ರದ ಒಂದು ಹಾಡು ಸಂಜಿತ್ ಹೆಗ್ಡೆ ಹಾಡುತ್ತಿದ್ದಾರೆ. ಆ ಹಾಡಿನಲ್ಲಿ ನಿಮ್ಮ ಕಥೆ ಬಳಸಿಕೊಳ್ತಾರೆ ಶಶಾಂಕ್.
ನೀವು ಪ್ರೇಮಿಸಿ ಮದುವೆಯಾಗಿರಬೇಕು. ಅಡೆತಡೆಗಳನ್ನು ದಾಟಿ ಗೆದ್ದಿರಬೇಕು. ಆ ಕಥೆಯನ್ನು ನೀವು ಪುಟ್ಟದಾಗಿ ಒಂದು ನಿಮಿಷದ ವಿಡಿಯೋ ಮಾಡಿ ಕಳಿಸಬೇಕು. +91 8618043067 ಈ ನಂಬರ್ಗೆ ವಾಟ್ಸಪ್ ಮಾಡಿದರೆ ಆಯಿತು. ಶಶಾಂಕ್ ತಮ್ಮ ಚಿತ್ರದ ಸಂಜಿತ್ ಹೆಗ್ಡೆ ಹಾಡಿನ ಪ್ರಮೋಷನ್ನಲ್ಲಿ ನಿಮ್ಮದೇ ಕಥೆ ಬಳಸಿಕೊಳ್ತಾರೆ..