ಡಾಲಿ ಧನಂಜಯ್ ಮತ್ತು ಕಾರ್ತಿಕ್ ಗೌಡ-ಯೋಗಿ ಬಿ.ರಾಜ್ ಕಾಂಬಿನೇಷನ್‍ನಲ್ಲಿ ತೆರೆಗೆ ಬರುತ್ತಿರೋ ಸಿನಿಮಾ ಹೊಯ್ಸಳ. ವಿಜಯ್ ನಿರ್ದೇಶನದ ಚಿತ್ರದ ಕಥೆಯ ಬಗ್ಗೆಯೇ ನೂರಾರು ಕಥೆಗಳಿವೆ. ಆ ಕಥೆಗೀಗ ಕಲಾವಿದರು ಬೇಕಾಗಿದ್ದಾರೆ.
ನೀವು ನಿಮ್ಮ ಹೈಟು, ವೇಯ್ಟು, ಲುಕ್ಕು, ಕಲರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದ್ಭುತವಾಗಿ ನಟಿಸುತ್ತೀರಾ.. ಅಷ್ಟು ಕ್ವಾಲಿಫಿಕೇಷನ್ ಸಾಕು. 8ರಿಂದ 60ನೇ ವಯಸ್ಸಿನವರು ಪ್ರಯತ್ನಿಸಿ ಎಂದು ಕರೆಕೊಟ್ಟಿದೆ ಹೊಯ್ಸಳ ಟೀಂ. ಹೊಯ್ಸಳ ಪೇಜಿಗೆ ಹೋದರೆ ಅಲ್ಲಿಯೇ ಮೇಯ್ಲ್ ಐಡಿ ಮತ್ತು ಡೀಟೈಲ್ಸ್ ಸಿಗುತ್ತೆ.