ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್. ಪುನೀತ್ ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ಆಗಿರೋದ್ರಿಂದ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಜೇಮ್ಸ್ ಸೃಷ್ಟಿಸಿರೋ.. ಸೃಷ್ಟಿಸುತ್ತಿರೋ ದಾಖಲೆಗಳ ಪಟ್ಟಿಗೆ ಈಗ ಇನ್ನೊಂದು ಹೊಸ ದಾಖಲೆಗಳು ಸೇರಿವೆ. ಇದು ಕೇವಲ ಆಸ್ಟ್ರೇಲಿಯಾದಲ್ಲಿ ಸೃಷ್ಟಿಯಾಗಿರೋ ದಾಖಲೆಗಳು.
ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿರೋ ಜೇಮ್ಸ್, ಅಲ್ಲಿಯೇ ಸೆನ್ಸಾರ್ ಆದ ಮೊದಲ ಕನ್ನಡ ಸಿನಿಮಾ ಅನ್ನೋ ದಾಖಲೆ ಬರೆದಿದೆ. ಅಲ್ಲಿ ಎಂಎ 15+ ಸರ್ಟಿಫಿಕೇಟ್ ಸಿಕ್ಕಿದೆ.
ಅಲ್ಲಿನ ಕ್ಲಾಸಿಫಿಕೇಷನ್ ಬ್ರಾಂಚ್ನಲ್ಲಿ ಸ್ಥಾನ ಪಡೆದ ಮೊದಲ ಕನ್ನಡ ಸಿನಿಮಾ ಜೇಮ್ಸ್. ಆಸ್ಟ್ರೇಲಿಯಾದಲ್ಲಿ ಮೊದಲ ದಿನವೇ 150+ ಶೋ ದಾಖಲೆ ಬರೆಯುತ್ತಿರೋ ಮೊದಲ ಕನ್ನಡ ಸಿನಿಮಾ ಜೇಮ್ಸ್.
ಸಿನಿಮಾ ರಿಲೀಸಾಗೋಕೆ ಇನ್ನೂ ಕೆಲವು ದಿನಗಳಿವೆ.. ಮತ್ತಷ್ಟು ಹೊಸ ಹೊಸ ದಾಖಲೆಗಳೂ ಸೃಷ್ಟಿಯಾಗಲಿವೆ..