ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರದ ಪ್ರಚಾರ ಕಾರ್ಯಗಳು ಬಿರುಸಾಗುತ್ತಿವೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಚಿತ್ರವನ್ನು ಇಡೀ ದೇಶದ ಮೂಲೆ ಮೂಲೆಗೂ ತಲುಪಿಸೋ ಸಾಹಸದಲ್ಲಿದ್ದಾರೆ. ಈಗ ಚಿತ್ರದ ಸಲಾಂ ಸೋಲ್ಜರ್ ಹಾಡನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.
ಇದು ನನಗೆ ಸಿಕ್ಕ ಗೌರವ ಎಂದು ಬರೆದುಕೊಂಡಿದ್ದಾರೆ ಸುದೀಪ್. ಡೈರೆಕ್ಟರ್ ಚೇತನ್ ಕುಮಾರ್ ಅವರ ಸಾಹಿತ್ಯವಿರೋ ಹಾಡಿಗೆ ಧ್ವನಿ ನೀಡಿರೋದು ಸಂಜಿತ್ ಹೆಗ್ಡೆ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅಲ್ಲಿಯೂ ದಾಖಲೆ ಬರೆಯುತ್ತಿದೆ ಜೇಮ್ಸ್.