ಮಾರ್ಚ್ 17. ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬವಷ್ಟೇ ಅಲ್ಲ, ಜಗ್ಗೇಶ್ ಅವರ ಹುಟ್ಟುಹಬ್ಬವೂ ಅವತ್ತೇ. ಹೀಗಾಗಿ ಪರಸ್ಪರ ವಿಷ್ ಮಾಡುವ ಸಂಪ್ರದಾಯ ಇಬ್ಬರಲ್ಲೂ ಇತ್ತು. ಪ್ರತೀ ವರ್ಷ ಪುನೀತ್ ಜಗ್ಗೇಶ್ ಅವರಿಗೆ ಕರೆ ಮಾಡಿ ಅಣ್ಣಾ.. ಹ್ಯಾಪಿ ಬರ್ತ್ ಡೇ ಎನ್ನುತ್ತಿದ್ದರು.
ಈ ವರ್ಷ ಪುನೀತ್ ಇಲ್ಲ. 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸೂ ಇಲ್ಲ. ಪ್ರತೀ ವರ್ಷ ಮಾರ್ಚ್ 17ರಂದು ಬರುತ್ತಿದ್ದ ಪುನೀತ್ ಕರೆ ಅಣ್ಣಾ ಹ್ಯಾಪಿ ಬರ್ತ್ ಡೇ ಎಂದು. ಮತ್ತೆ ಎಂದೂ ಬರದಂತಾಯಿತು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್. ಮಾರ್ಚ್ 17ರಂದು ಜೇಮ್ಸ್ ರಿಲೀಸ್. ಅಪ್ಪು ಇರಲ್ಲ.