` ತೆಲುಗಿಗೆ ಹೊರಟ ಇನ್ನೊಬ್ಬ ಕನ್ನಡತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತೆಲುಗಿಗೆ ಹೊರಟ ಇನ್ನೊಬ್ಬ ಕನ್ನಡತಿ
Sanjana Anand

ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಕನ್ನಡದವರದ್ದೇ ದೊಡ್ಡ ಹವಾ ಸೃಷ್ಟಿಯಾಗಿದೆ.  ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ ನಟೇಶ್.. ಮೊದಲಾದವರು ಮಿಂಚುತ್ತಲೇ ಇದ್ದಾರೆ. ಈ ಲಿಸ್ಟ್‍ಗೀಗ ಇನ್ನೊಬ್ಬ ನಟಿ ಸೇರಿದ್ದಾರೆ. ಸಂಜನಾ ಆನಂದ್.

ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಲಗ ಚಿತ್ರಗಳ ಮೂಲಕ ಪ್ರತಿಭಾವಂತೆ  ಅನ್ನೋದನ್ನು ಪ್ರೂವ್ ಮಾಡಿದ್ದ ಸಂಜನಾ ತೆಲುಗಿನಲ್ಲಿ ನೇನು ಮೀಕು ಭಾಗಾ ಕಾವಲ್ಸಿನವಾಡಿನಿ.. (ನಾನು ನಿಮಗೆ ತುಂಬಾ ಬೇಕಾದವನು) ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ನಿರ್ಮಾಪಕಿಯಾಗಿರೋದು ಕೋಡಿ ರಾಮಕೃಷ್ಣ ಮಗಳು ದಿವ್ಯಾ ದೀಪ್ತಿ. ಲವ್ ಸ್ಟೋರಿ ಸಿನಿಮಾ. ಕಿರಣ್ ಅಬ್ಬಾವರಂ ಅನ್ನೋವ್ರು ಹೀರೋ ಎಂದು ಮಾಹಿತಿ ಕೊಟ್ಟಿದ್ದಾರೆ ಸಂಜನಾ.