ಮಾರ್ಚ್ 17ಕ್ಕೆ ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಚಿತ್ರ ಪುನೀತ್ ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ. ಹೀಗಾಗಿ ನಿರೀಕ್ಷೆಯೂ ಹೆಚ್ಚು. ಅಪ್ಪು ಪಾತ್ರಕ್ಕೆ ಡಬ್ ಮಾಡಿರುವುದು ಶಿವಣ್ಣ. ಮಾರ್ಚ್ 17ರಂದು ಅಪ್ಪು ಅಭಿಮಾನಿಗಳು ನಾಡ ಹಬ್ಬ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಆ ದಿನ ಇನ್ನೂ ಒಂದು ಹಬ್ಬವಿದೆ.
ಮಾರ್ಚ್ 17ರಂದು ಜೇಮ್ಸ್ ಜೊತೆಯಲ್ಲಿ ವೇದ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗುತ್ತಿದೆಯಂತೆ. ವೇದ ಶಿವಣ್ಣ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿರುವ ಸಿನಿಮಾ. ಹರ್ಷ ನಿರ್ದೇಶನದ ವೇದ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಅದ್ದೂರಿ ಟೀಸರ್ವೊಂದು ಜೇಮ್ಸ್ ಜೊತೆ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಇದೆ. ಅಧಿಕೃವಾಗಿಲ್ಲ.