ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ನಟಿಸುತ್ತಿರುವ ಕಬ್ಜ ಚಿತ್ರಕ್ಕೆ ಹೀರೋಯಿನ್ ಬಂದಿದ್ದಾರೆ. ಗಾಸಿಪ್ಪುಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ಬಂದಿರೋದು ಶ್ರೇಯಾ ಸರಣ್.
ಈ ಸಿನಿಮಾಕ್ಕೆ ದಕ್ಷಿಣ ಭಾರತದ ಪ್ರಮುಖ ನಾಯಕಿಯರನ್ನೇ ಕರೆತರುತ್ತೇನೆ ಎಂದಿದ್ದ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು, ಹೇಳಿದಂತೆಯೇ ಶ್ರೇಯಾ ಅವರನ್ನು ಕರೆ ತಂದಿದ್ದಾರೆ.
ಉಪ್ಪಿ ಜೊತೆಗೆ ಶ್ರೇಯಾಗಿದು ಮೊದಲ ಸಿನಿಮಾ. ಶೂಟಿಂಗ್ ಕೂಡಾ ಶುರುವಾಗಿದೆ. ಇನ್ನೊಬ್ಬ ನಾಯಕಿ ಯಾರು ಅನ್ನೋದು ಈಗಲೂ ಗುಟ್ಟಾಗಿಯೇ ಇದೆ. ಶ್ರೇಯಾ ಚಂದ್ರ ಸಿನಿಮಾದಲ್ಲಿ ಪ್ರೇಮ್ ಎದುರು ನಟಿಸಿದ್ದರು. ಈಗ 9 ವರ್ಷಗಳ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ.ಮಧುಮತಿ ಪಾತ್ರದಲ್ಲಿ..