` ಅದೊಂದೇ ಏರಿಯಾಗೆ 12 ಕೋಟಿ ಡಿಮ್ಯಾಂಡ್ : ನೋ ಎಂದರಂತೆ ಜೇಮ್ಸ್ ನಿರ್ಮಾಪಕರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಅದೊಂದೇ ಏರಿಯಾಗೆ 12 ಕೋಟಿ ಡಿಮ್ಯಾಂಡ್ : ನೋ ಎಂದರಂತೆ ಜೇಮ್ಸ್ ನಿರ್ಮಾಪಕರು
James Movie Image

ಯಾವುದೇ ಸಿನಿಮಾ ಇರಲಿ. ಕರ್ನಾಟಕದ ಅತಿ ದೊಡ್ಡ ಮಾರುಕಟ್ಟೆ ಬಿಕೆಟಿ. ಬೆಂಗಳೂರು-ಕೋಲಾರ-ತುಮಕೂರು. ಸಿನಿಮಾಗಳು ಹೆಚ್ಚು ದುಡಿಯೋದು ಈ ಪ್ರದೇಶದಲ್ಲೇ. ಜೇಮ್ಸ್ ಚಿತ್ರ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಹವಾ ಏನೋ ದೊಡ್ಡದಾಗಿದೆ. ಏಕೆಂದರೆ ಇದು ಅಪ್ಪು ಸಿನಿಮಾ. ಅಪ್ಪು ಹೀರೋ ಆಗಿರೋ ಕೊನೆಯ ಸಿನಿಮಾ. ಹೀಗಾಗಿ ನಿರೀಕ್ಷೆಯೂ ದೊಡ್ಡದಾಗಿಯೇ ಇದೆ. ವಿತರಕರ ನಿರೀಕ್ಷೆಯೂ ದೊಡ್ಡದು.

ಬಿಕೆಟಿ ಏರಿಯಾಗೆ ವಿತರಕರು 12 ಕೋಟಿ ಬೇಡಿಕೆ ಇಟ್ಟಿದ್ದು, ನಿರ್ಮಾಪಕ ಕಿಶೋರ್ ಪತ್ತಿಕೊಂಡ ನೋ ಎಂದಿದ್ದಾರಂತೆ. ಜೇಮ್ಸ್ ಚಿತ್ರಕ್ಕೆ ಪೈಪೋಟಿ ಇಲ್ಲ. ಯಾವುದೇ ಬೇರೆ ಸಿನಿಮಾ ಆ ವಾರ ರಿಲೀಸ್ ಆಗುತ್ತಿಲ್ಲ. ಪುನೀತ್ ಎದುರು ರಾಜಕುಮಾರ ನಾಯಕಿ ಪ್ರಿಯಾ ಆನಂದ್. ಶಿವಣ್ಣ ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡಾ ಅತಿಥಿ ಪಾತ್ರಗಳಲ್ಲಿದ್ದು ನಿರೀಕ್ಷೆ ದೊಡ್ಡದು.