ಡೈರೆಕ್ಟರ್ ಗುರು ಪ್ರಸಾದ್ ಮತ್ತು ಜಗ್ಗೇಶ್ ವೃತ್ತಿ ಜೀವನದ ಮರೆಯಲಾಗದ ಚಿತ್ರ ಎದ್ದೇಳು ಮಂಜುನಾಥ. ಸೂಪರ್ ಹಿಟ್ ಆಗಿದ್ದ ಅದೇ ಟೈಟಲ್ ಇಟ್ಟುಕೊಂಡು ಗುರು ಪ್ರಸಾದ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಎದ್ದೇಳು ಮಂಜುನಾಥ 2. ಹಾಗಂತ ಇದು ಆ ಮಂಜುನಾಥ ಚಿತ್ರದ ಸೀಕ್ವೆಲ್ ಅಲ್ಲ. ಹೊಸ ಚಿತ್ರ, ಹೊಸ ಕಥೆ ಮತ್ತು ಹಳೇ ಟೈಟಲ್.
ಅಂದಹಾಗೆ ಇಲ್ಲಿ ಜಗ್ಗೇಶ್ ನಟಿಸಿಲ್ಲ. ಡೈರೆಕ್ಟರ್ ಗುರು ಪ್ರಸಾದ್ ಅವರೇ ಹೀರೋ. ಅಷ್ಟೇ ಅಲ್ಲ, ಖುದ್ದು ಗುರು ಪ್ರಸಾದ್ ಅವರದ್ದೇ ಡೈರೆಕ್ಷನ್ ಇದೆ.
ಇದು ಸೀಕ್ವೆಲ್ ಅಲ್ಲ. ನಾನು ಯಾವುದೇ ಚಿತ್ರಕ್ಕೆ ಸೀಕ್ವೆಲ್ ಮಾಡಲ್ಲ. ನಾನು ಚಿತ್ರದ ಕಥಾನಾಯಕ ಎಂದಿದ್ದಾರೆ ಗುರುಪ್ರಸಾದ್.
ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ ಅನ್ನೋದು ಬಿಗ್ ನ್ಯೂಸ್. ಗುರುಪ್ರಸಾದ್ ಇಲ್ಲಿ ನಿಧಾನ ಚಿತ್ರೀಕರಣದ ತಮ್ಮದೇ ಸಂಪ್ರದಾಯ ಮುರಿದಿದ್ದಾರೆ. ರಚಿತಾ ಮಹಾಲಕ್ಷ್ಮಿ ಚಿತ್ರದ ನಾಯಕಿ. ಸಕಲೇಶಪುರದ ಹುಡುಗಿ. ಆದರೆ ಹೆಚ್ಚು ಮಿಂಚಿರೋದು ತಮಿಳು ಕಿರುತೆರೆಯಲ್ಲಿ. ಚಿತ್ರ ರೆಡಿಯಾಗಿದೆ ಎಂದು ಇಡೀ ಚಿತ್ರತಂಡದೊಂದಿಗೆ ಬಂದು ಹೇಳಿರುವ ಗುರುಪ್ರಸಾದ್ ಚಿತ್ರವನ್ನು ಶೀಘ್ರದಲ್ಲೇ ರಿಲೀಸ್ ಮಾಡ್ತಾರಂತೆ.