ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಕುಟುಂಬಕ್ಕೆ ಹೊಸ ಸದಸ್ಯರು ಬಂದಿದ್ದಾರೆ. ಜ್ಯೂನಿಯರ್ ರಿಷಬ್ ಶೆಟ್ಟಿ. ಪ್ರಗತಿ ಶೆಟ್ಟಿ 2ನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಹೆಣ್ಣು ಮಗು. ಇದನ್ನು ರಿಷಬ್ ಖುಷಿಯಿಂದಲೇ ಹೇಳಿಕೊಂಡು ಪ್ರಗತಿಯಷ್ಟೇ ಮುದ್ದಾದ ಮಗು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಗೆ ಈಗಾಗಲೇ ಒಂದು ಮಗುವಿದೆ. ರಣ್‍ವಿತ್ ಶೆಟ್ಟಿ. ಆತನಿಗೀಗ ತಂಗಿ ಸಿಕ್ಕಿದ್ದಾಳೆ.