ಇದು ಬೊಮ್ಮಾಯಿ ಬಜೆಟ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ. ಇದೂವರೆಗೆ ವರ್ಷಕ್ಕೆ 125 ಚಿತ್ರಗಳಿಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಅದನ್ನು 200 ಚಿತ್ರಗಳಿಗೆ ನೀಡಲಾಗುವುದು ಎಂದು ಬೊಮ್ಮಾಯಿ ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷ ಅಂದ್ರೆ 175 ಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ಚಿತ್ರರಂಗ ಮನವಿ ಮಾಡಿತ್ತು. ಅದಕ್ಕೆ ಇನ್ನೂ 25 ಚಿತ್ರಗಳನ್ನು ಸೇರಿಸಿ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದಾರೆ ಬೊಮ್ಮಾಯಿ.
ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಿನಿಮೋತ್ಸವದಲ್ಲಿ ಸಚಿವ ಮುನಿರತ್ನ ಈ ಬಗ್ಗೆ ಸುಳಿವು ಕೊಟ್ಟಿದ್ದರು. ಚಿತ್ರರಂಗಕ್ಕೆ ಬೊಮ್ಮಾಯಿ ಎಂದೂ ಮರೆಯಲಾಗದ ಕೊಡುಗೆ ಕೊಡಲಿದ್ದಾರೆ ಎಂದು ತಿಳಿಸಿದ್ದರು.
ಸಬ್ಸಿಡಿ ನಿಯಮ ಮಾತ್ರ ಹಿಂದಿನಂತೆಯೇ ಇರಲಿದೆ. ಕಾದಂಬರಿ ಅಧರಿತ, ಸಂಸ್ಕøತಿ ಬಿಂಬಿಸುವ ಚಿತ್ರಗಳಿಗೆ 25 ಲಕ್ಷ. ಮಕ್ಕಳ ಸಿನಿಮಾ, ಬ್ಯಾರಿ, ಕೊಂಕಣಿ, ತುಳು ಭಾಷೆಯ ಚಿತ್ರಗಳಿಗೆ 15 ಲಕ್ಷ, ಮಿಕ್ಕ ಚಿತ್ರಗಳಿಗೆ 10 ಲಕ್ಷ ನೀಡಲಾಗುತ್ತದೆ. ಡಬ್ ಆದ ಚಿತ್ರಗಳು, ಅಶ್ಲೀಲ ಚಿತ್ರಗಳಿಗೆ ಸಬ್ಸಿಡಿ ಇರಲ್ಲ.