ಕೆಜಿಎಫ್ ಚಾಪ್ಟರ್ 1ನ ಮಾತು ಬಿಡಿ.. ನಿರೀಕ್ಷೆಗಳು ಕಡಿಮೆಯಿದ್ದವು. ಸಿಕ್ಕ ಗೆಲುವು ಬೋನಸ್. ಆದರೆ ಕೆಜಿಎಫ್ ಚಾಪ್ಟರ್ 2 ಹಾಗಲ್ಲ.. ನಿರೀಕ್ಷೆಗಳು ಬೆಟ್ಟದಷ್ಟಿವೆ. ಆ ಬೆಟ್ಟದಷ್ಟು ನಿರೀಕ್ಷೆ ಹುಟ್ಟೋಕೆ ಕಾರಣ ಚಾಪ್ಟರ್ 1 ಸೃಷ್ಟಿಸಿದ ಇತಿಹಾಸ. ಹಾಗಾದರೆ ಚಾಪ್ಟರ್ 2 ಹೇಗಿದೆ? ಅರೆ.. ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದೂವರೆ ತಿಂಗಳು ಟೈಮಿದೆ. ಈಗ್ಲೇ ಹೇಗ್ ಹೇಳೋಕಾಗುತ್ತೆ ಅನ್ನಬೇಡಿ. ಅದನ್ನು ನೋಡಿದವರೊಬ್ಬರು ಮೊದಲ ವಿಮರ್ಶೆ ಕೊಟ್ಟಿದ್ದಾರೆ.
ಕೆಜಿಎಫ್ 2 ಸಿನಿಮಾ ನೋಡಿದ್ದು ಮನಸ್ಸಿಗೆ ಮುದ ನೀಡಿತು. ವಿಜಯ್ ಕಿರಗಂದೂರು ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಪ್ರಶಾಂತ್ ನೀಲ್ ಹೊಸ ಸ್ಟಾಂಡರ್ಡ್ ಸೆಟ್ ಮಾಡಿದ್ದಾರೆ. ಇದು ಪೃಥ್ವಿರಾಜ್ ಸುಕುಮಾರನ್ ಕೊಟ್ಟಿರೋ ವಿಮರ್ಶೆ.
ಕೆಜಿಎಫ್ ಪ್ರಚಾರಕ್ಕೆ ತಯಾರಿ ಆರಂಭಿಸಿರುವ ಚಿತ್ರತಂಡ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಅವರನ್ನು ಭೇಟಿ ಮಾಡಿದೆ. ಮಲಯಾಳಂಣಲ್ಲಿ ಕೆಜಿಎಫ್ ವಿತರಣೆ ಹಕ್ಕು ಅವರದ್ದೇ. ಮಲಯಾಳಂನಲ್ಲಿ ವಿಭಿನ್ನ ಕಥಾಹಂದರದ ಚಿತ್ರಗಳಿಂದಲೇ ಸಕ್ಸಸ್ ಕಂಡಿರೋ ನಟ ಪೃಥ್ವಿರಾಜ್. ಈಗ ಕೆಜಿಎಫ್ 2 ವಿತರಣೆ ಮಾಡುತ್ತಿದ್ದಾರೆ. ಮಲಯಾಳಂನಲ್ಲಿ.